ಆರ್ ಬಿಐ ನೂತನ ಗವರ್ನರ್ ಆಗಿ ಶಕ್ತಿಕಾಂತ ದಾಸ್ ಆಯ್ಕೆ

Update: 2018-12-11 16:17 GMT

ಹೊಸದಿಲ್ಲಿ, ಡಿ. 11: ಭಾರತೀಯ ರಿಸರ್ವ್ ಬ್ಯಾಂಕ್‌ನ ನೂತನ ಗವರ್ನರ್ ಆಗಿ ಕೇಂದ್ರ ಸರಕಾರ ಮಂಗಳವಾರ ಶಕ್ತಿಕಾಂತ್ ದಾಸ್ ಅವರನ್ನು ನೇಮಕ ಮಾಡಿದೆ. ಊರ್ಜಿತ್ ಪಟೇಲ್ ಅವರು ವೈಯುಕ್ತಿ ಕಾರಣಕ್ಕಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಸ್ಥಾನಕ್ಕೆ ರಾಜೀನಾಮೆ ನೀಡಿದ ಒಂದು ದಿನದ ಬಳಿಕ ಆ ಸ್ಥಾನಕ್ಕೆ ಶಕ್ತಿಕಾಂತ್ ದಾಸ್ ಅವರನನ್ನು ನೇಮಕ ಮಾಡಲಾಗಿದೆ.

ಮೂರು ವರ್ಷಗಳ ಅವಧಿಗೆ ದಾಸ್ ಅವರ ನಿಯೋಜನೆಗೆ ಸಂಪುಟದ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ ಎಂದು ವೈಯಕ್ತಿಕ ಹಾಗೂ ತರಬೇತು ಇಲಾಖೆಯ ಅಧಿಕೃತ ಆದೇಶ ತಿಳಿಸಿದೆ. ಪ್ರಧಾನಿ ಅವರು 2016 ನವೆಂಬರ್‌ನಲ್ಲಿ ನೋಟು ನಿಷೇಧ ಘೋಷಿಸಿದ ಸಂದರ್ಭ ದಾಸ್ ಅವರು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಆಗಿದ್ದರು. ಆದುದರಿಂದ ದಾಸ್ ಅವರು ನರೇಂದ್ರ ಮೋದಿ ಅವರಿಗೆ ಆಪ್ತರು ಎಂದು ಹೇಳಲಾಗುತ್ತಿದೆ. ತಮಿಳುನಾಡು ಕೇಡರ್‌ನ 1980ರ ಬ್ಯಾಚ್‌ನ ಐಎಎಸ್ ಅಧಿಕಾ ದಾಸ್. ಅವರು ತನ್ನ ಐಎಎಸ್ ಕೆರಿಯರ್‌ನಲ್ಲಿ ಭಾರತ ಹಾಗೂ ತಮಿಳುನಾಡು ಸರಕಾರದಲ್ಲಿ ವಿವಿಧ ಹುದ್ದೆಯನ್ನು ನಿರ್ವಹಿಸಿದ್ದಾರೆ. ದಾಸ್ ಅವರು 2017 ಮೇಯಲ್ಲಿ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿ ನಿವೃತ್ತಿಯಾಗಿದ್ದರು.

1990ರ ಬಳಿಕ ಅಧಿಕಾರಾವಧಿ ಪೂರ್ಣಗೊಳ್ಳದೆ ಗವರ್ನರ್ ಸ್ಥಾನದಿಂದ ಕೆಳಗಿಳಿದ ಮೊದಲ ವ್ಯಕ್ತಿ ಊರ್ಜಿತ್ ಪಟೇಲ್. ಕೇಂದ್ರ ಸರಕಾರದೊಂದಿಗಿನ ಕುದಿಯುತ್ತಿರುವ ಭಿನ್ನಾಬಿಪ್ರಾಯದ ಕುರಿತು ಚರ್ಚೆ ನಡೆಯಲಿದ್ದ ಆರ್‌ಬಿಐಯ ಡಿಸೆಂಬರ್ 14ರ ಸಭೆ ನಡೆಯುವ ಮುನ್ನ ಪಟೇಲ್ ರಾಜೀನಾಮೆ ನೀಡಿದ್ದರು. ಪಟೇಲ್ ಅವರ ಮೂರು ವರ್ಷದ ಅಧಿಕಾರಾವಧಿ 2019 ಡಿಸೆಂಬರ್‌ನಲ್ಲಿ ಅಂತ್ಯಗೊಳ್ಳಲಿತ್ತು. ಪೂರ್ವಾಧಿಕಾರಿಯಂತೆ ಪಟೇಲ್ ಅವರನ್ನು ಎರಡನೇ ಅವಧಿಗೆ ಅರ್ಹರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News