ಕಾಪು: ಮಿಲಾದ್ ಪ್ರತಿಭಾ ಸಂಗಮ

Update: 2018-12-11 15:28 GMT

ಕಾಪು, ಡಿ.11: ಸೈಯದ್ ಅರಬಿ ಜುಮ್ಮಾ ಮಸೀದಿ ಹಾಗೂ ಮದ್ರಸಾ ಭಾಸ್ಕರ್ ನಗರ ಉಚ್ಚಿಲ ಇದರ ಆಶ್ರಯದಲ್ಲಿ ನಡೆದ ಐದು ದಿನಗಳ ಮಿಲಾದ್ ಪ್ರತಿಭಾ ಸಂಗಮ ಹಾಗೂ ವಾರ್ಷಿಕ ಸ್ವಲಾತ್ ಸಮಾರೋಪ ಸಮಾರಂಭವು ಇತ್ತೀಚೆಗೆ ಮಸೀದಿ ವಠಾರದಲ್ಲಿ ಖತೀಬ್ ಇಸಾಕ್ ಫೈಝಿ ದುಆಗೈದು ಉದ್ಘಾಟಿಸಿದರು.

ಸೈಯದ್ ಅರಬಿ ಜುಮ್ಮಾ ಮಸೀದಿಯ ಅಧ್ಯಕ್ಷ ಇಬ್ರಾಹೀಂ ತವಕ್ಕಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸರ್ ಹಿಂದ್ ದಾವಾ ಕಾಲೇಜ್ ಬಂಗ್ಲೆಗುಡ್ಡೆ ಪ್ರಾಂಶುಪಾಲ ಅಹ್ಮದ್ ಶರೀಫ್ ಸಅದಿ ಅಲ್-ಖಾಮಿಲ್ ಕಿಲ್ಲೂರು ಉದ್ಘಾಟನಾ ಭಾಷಣ ಮಾದರು.

ಕೆ.ಎ.ಇಸಾಕ್ ಫೈಝಿ ಪ್ರವಾದಿಯವರ ಜನನ ಮತ್ತು ಮರಣದ ವಿಷಯದ ಬಗ್ಗೆ ಮತ ಪ್ರವಚನ ನೀಡಿದರು. ಸಮಸ್ತ ಕೇರಳ ಜಮೀಯ್ಯತುಲ್ ಉಲಮಾದ ಸದಸ್ಯ ಶೈಖುನಾ ಶರಫುಲು ಉಲಮಾ ಅಬ್ಬಾಸ್ ಉಸ್ತಾದ್ ಮಂಜನಾಡಿ ಆಶೀರ್ವಚನ ನೀಡಿದರು.

ಸೈಯದ್ ಅರಬಿ ಜುಮ್ಮಾ ಮಸೀದಿಯ ಉಪಾಧ್ಯಕ್ಷ ಹಾಜಿ ಉಸ್ಮಾನ್ ಕಟ್ಟಿಂಗೇರಿ, ಪ್ರಧಾನ ಕಾರ್ಯದರ್ಶಿ ಶಬ್ಬೀರ್ ಇಸ್ಮಾಯೀಲ್, ಕೋಶಾಧಿಕಾರಿ ಇದಿನಬ್ಬ ಶಫಾತ್, ಮದ್ರಸ ಅಧ್ಯಾಪಕರಾದ ಶರೀಫ್ ಸಖಾಫಿ, ಅಬ್ದುಲ್ ಹಕೀಂ ಮುಸ್ಲಿಯಾರ್, ಶಾಹುಲ್ ಹಮೀದ್ ನಯಿಮಿ ಕನ್ನಂಗಾರ್, ಅಬ್ದುಲ್ ರಝಾಕ್ ಸಅದಿ, ಇಲ್ಯಾಸ್ ದೇಜಾಡಿ, ಎರ್ಮಾಳ್ ಜುಮ್ಮಾ ಮಸೀದಿಯ ಖತೀಬ್ ಮುಹಮ್ಮದ್ ಶಬ್ಬೀರ್ ಫೈಝಿ, ನವಾಝ್ ಅಶ್ರಫ್, ಇಬ್ರಾಹೀಂ ಅರ್ಷ್, ಮಯ್ಯದ್ದಿ ಪೊಲ್ಯ, ಆರಿಫ್ ಖಾಸಿಂ, ಮೊನಬ್ಬ, ದೀವು ರಫೀಕ್, ಇಕ್ಬಾಲ್ ಮೆಡಿಕಲ್, ಹಸನ್ ಬ್ಯಾರಿ ಕೊಪ್ಪ ಹಾಗೂ ಹಾಝಿ ಅಬ್ದುಲ್ ರಝಾಕ್ ಮೊದಲಾದವರು ಉಪಸ್ಥಿತರಿದ್ದರು.

ಮಸೀದಿ ಲೆಕ್ಕ ಪರಿಶೋಧಕ ಅಶ್ರಫ್ ಮುಸ್ಲಿಯಾರ್ ದೇಜಾಡಿ ಸ್ವಾಗತಿಸಿದರು. ಮದ್ರಸ ಅಧ್ಯಾಪಕ ಶರೀಫ್ ಸಖಾಫಿ ವಂದಿಸಿದರು. ಸದಸ್ಯ ಪಿ.ಪಿ.ಅಬ್ದುಲ್ ಕರೀಂ ಪೊಲ್ಯ ಕಾರ್ಯಕ್ರಮ ನಿರೂಪಿಸಿದರು.

ಮಗ್ರಿಬ್ ನಮಾಝ್ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಸ್ವಲಾತ್ ಮಜ್ಲೀಸ್, ವಿದ್ಯಾರ್ಥಿಗಳಿಂದ ಪುರಸ್ಕಾರ, ದಫ್ ಪ್ರದರ್ಶನ, ಮಿಲಾದ್ ಜಾಥಾ ವೌಲಿದ್ ಪಾರಾಯಣ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News