ಫೋಟೊಗ್ರಫಿಯಲ್ಲಿ ಡಾ.ಅಖ್ತರ್ ಹುಸೇನ್‌ಗೆ ಪ್ರಶಸ್ತಿ

Update: 2018-12-11 17:10 GMT

ಮಂಗಳೂರು, ಡಿ.11: ಯೆನೆಪೊಯ ದಂತ ವೈದ್ಯಕೀಯ ಕಾಲೇಜಿನ ಪ್ರೊ. ಡಾ.ಅಖ್ತರ್ ಹುಸೇನ್ ಅವರಿಗೆ ಮಂಗಳೂರಿನ ಕಂಬಳದ ‘ದಿ ಸ್ಪ್ಲಾಶ್ ಫೊಟೋಗ್ರಫಿ’ಗೆ ‘ಬೆಸ್ಟ್ ಆಕ್ಷನ್ ಫೊಟೋ ಇನ್ ಟೆರೆಸ್ಟ್ರಿಯಲ್ ಸ್ಪೋಟ್ಸ್ ಅವಾರ್ಡ್’ ದೊರಕಿದೆ.

ಈ ಫೊಟೋಗ್ರಫಿಯು ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ಡಿ.10ರಿಂದ 12ರತನಕ ‘ದಿ ಗ್ರೇಟ್ ಔಟ್‌ಡೋರ್ಸ್‌-2018’ ಎಂಬ ಫೊಟೋಗ್ರಫಿ ಪ್ರದರ್ಶನ ಆಯೋಜಿಸಲಾಗಿತ್ತು. ಈ ಫೊಟೋಗ್ರಫಿ ಪ್ರದರ್ಶನವನ್ನು ಎಸ್ಸೆನ್ ಕಮ್ಯೂನಿಕೇಶನ್‌ನವರು ಕರ್ನಾಟಕ ಟೂರಿಸಂನ ಸಹಯೋಗದೊಂದಿಗೆ ಆಯೋಜಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News