‘ನಾನು ಸನ್ಯಾಸಿಯಾಗಲು ಹೊರಟಿದ್ದೆ !’ ಕೃತಿಯ ಮುಖಪುಟ ಅನಾವರಣ

Update: 2018-12-12 14:59 GMT

ಉಡುಪಿ, ಡಿ.12: ಉಡುಪಿ ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಮಂಜುನಾಥ್ ಕಾಮತ್ ಅವರ ‘ನಾನು ಸನ್ಯಾಸಿಯಾಗಲು ಹೊರಟಿದ್ದೆ!’ ಪುಸ್ತಕದ ಮುಖಪುಟವನ್ನು ಕೆಮ್ಮಣ್ಣು ಪಡುಕುದ್ರು ತೂಗು ಸೇತುವೆಯ ಬಳಿ ನಲ್ವತ್ತು ದ್ವೀಪಗಳ ನಾವಿಕ ಸತ್ಯಣ್ಣ ಅನಾವರಣಗೊಳಿಸಿದರು.

ಸೀತೆ ಮತ್ತು ಸ್ವರ್ಣಾ ನದಿ ಒಟ್ಟಾಗಿ ಸಮುದ್ರ ಸೇರುವ ಜಾಗದಲ್ಲಿ ಅನೇಕ ಸುಂದರ ಕುದ್ರುಗಳಿವೆ. ಕೇರಳ ಮಾದರಿಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶ ಇಲ್ಲಿದೆ. ಈ ಕುರಿತು ಬೆಳಕು ಚೆಲ್ಲುವ ಸಲುವಾಗಿ ಮುಖಪುಟವನ್ನು ಉಡುಪಿಯ ಕೆಮ್ಮಣ್ಣು ಸಮೀಪದ ನಲ್ವತ್ತು ದ್ವೀಪಗಳ ಪರಿಸರದಲ್ಲಿ, ಸತ್ಯಣ್ಣನವರ ನಾಡ ದೋಣಿಯಲ್ಲಿ, ಸ್ವರ್ಣಾ ನದಿಯಲ್ಲಿ ಪಯಣಿಸುತ್ತಾ ವಿಭಿನ್ನ ವಾಗಿ ಅನಾವರಗೊಳಿಸಲಾಯಿತು.

ಪ್ರವಾಸ, ವೃತ್ತಿ, ಹಳ್ಳಿಗರ ಒಡನಾಟದ ಅನುಭವಗಳುಳ್ಳ ಲೇಖಕರ ಹಿಂದಿನ ಕೃತಿ ‘ದಾರಿ ತಪ್ಪಿಸು ದೇವರೇ!’ ಬಹು ಜನಪಿಯಗೊಂಡಿದ್ದು, ಮೂರು ಆವೃತ್ತಿ ಗಳನ್ನು ಈಗಾಗಲೇ ಕಂಡಿದ್ದು, ಸಿನಿಮಾ ಕೂಡಾ ಆಗುತ್ತಿದೆ. ಮೂರು ಚಿತ್ರಗಳ ಮೂಲಕ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ಬಿ.ಎಸ್.ಲಿಂಗದೇವರು ನಿರ್ದೇಶಿಸಲಿದ್ದಾರೆ.

ಲೇಖಕರ ಮೂರನೇ ಪುಸ್ತಕ ‘ನಾನು ಸನ್ಯಾಸಿಯಾಗಲು ಹೊರಟಿದ್ದೆ! ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News