ಪಾಕ್ ಇತಿಹಾಸದಲ್ಲೇ ಸೌದಿಯಿಂದ ಅತಿ ದೊಡ್ಡ ಹೂಡಿಕೆ: ಸಚಿವ

Update: 2018-12-13 16:20 GMT

ಇಸ್ಲಾಮಾಬಾದ್, ಡಿ. 13: ಪಾಕಿಸ್ತಾನಕ್ಕಾಗಿ ಹೂಡಿಕೆ ಪ್ಯಾಕೇಜೊಂದನ್ನು ಸೌದಿ ಅರೇಬಿಯವು ರೂಪಿಸುತ್ತಿದ್ದು, ಇದು ದೇಶದ ಇತಿಹಾಸದಲ್ಲೇ ಅತಿ ದೊಡ್ಡ ವಿದೇಶಿ ಹೂಡಿಕೆಯಾಗಿದೆ ಎಂದು ಪಾಕಿಸ್ತಾನದ ಹಣಕಾಸು ಸಚಿವ ಅಸಾದ್ ಉಮರ್ ಗುರುವಾರ ಹೇಳಿದ್ದಾರೆ.

ಪ್ಯಾಕೇಜನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಇಸ್ಲಾಮಾಬಾದ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಸಚಿವರು ತಿಳಿಸಿದರು ಎಂದು ‘ಡಾನ್ ನ್ಯೂಸ್’ ವರದಿ ಮಾಡಿದೆ.

‘‘ಚೆಂಡು ಈಗ ನಮ್ಮ ಅಂಗಳದಲ್ಲಿದೆ. ಮುಂದಿನ ವಾರ ಅದನ್ನು ಅನುಮೋದನೆಗಾಗಿ ಸಚಿವ ಸಂಪುಟಕ್ಕೆ ಸಲ್ಲಿಸಲಾಗುವುದು ಹಾಗೂ ಬಳಿಕ ಅದನ್ನು ಘೋಷಿಸಲಾಗುವುದು’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News