ಏರ್ ಇಂಡಿಯಾಗೆ ಕೇಂದ್ರದಿಂದ 1 ಸಾವಿರ ಕೋಟಿ ರೂ. ಬಾಕಿ!

Update: 2018-12-13 16:28 GMT

ಹೊಸದಿಲ್ಲಿ, ಡಿ.13: ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಏರ್ ಇಂಡಿಯಾ ಸಂಸ್ಥೆಗೆ ಸರಕಾರದಿಂದ 1,000.62 ಕೋಟಿ ರೂ. ಪಾವತಿಸಲು ಬಾಕಿಯಿದೆ ಎಂದು ನಾಗರಿಕ ವಿಮಾನಯಾನ ಖಾತೆಯ ಸಹಾಯಕ ಸಚಿವ ಜಯಂತ್ ಸಿನ್ಹ ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ವಿಶೇಷ ಹೆಚ್ಚುವರಿ ವಿಮಾನ ಸೇವೆ(ಎಸ್‌ಇಎಸ್‌ಎಫ್)ಗಾಗಿ ವಿದೇಶ ವ್ಯವಹಾರ ಇಲಾಖೆ, ರಕ್ಷಣಾ ಇಲಾಖೆ ಹಾಗೂ ಗೃಹ ಇಲಾಖೆಯಿಂದ ಏರ್‌ಇಂಡಿಯಾಗೆ ಈ ಹಣ ಸಂದಾಯವಾಗಬೇಕಿದೆ.

ಬಾಕಿ ಪಾವತಿಸುವಂತೆ ಏರ್‌ಇಂಡಿಯಾ ಸಂಸ್ಥೆ ನಿಯಮಿತ ಅನುಸರಣೆ(ರೆಗ್ಯುಲರ್ ಫಾಲೊ ಅಪ್) ಮಾಡಿದೆ. ಸಾಮಾನ್ಯವಾಗಿ ನಾಗರಿಕ ವಿಮಾನಯಾನ ಇಲಾಖೆ ಕ್ಲಪ್ತ ಕಾಲಕ್ಕೆ ಮೊತ್ತವನ್ನು ಪಾವತಿಸುತ್ತದೆ ಎಂದು ಸಚಿವರು ತಿಳಿಸಿದರು. ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿಗಳ ಪ್ರಯಾಣಕ್ಕೆ ಬಿ-747-400 ವಿಮಾನಗಳನ್ನು ಏರ್‌ಇಂಡಿಯಾ ಒದಗಿಸುತ್ತದೆ. ಸಂಬಂಧಿತ ಇಲಾಖೆಗಳು ಈ ವೆಚ್ಚವನ್ನು ಏರ್ ಇಂಡಿಯಾ ಸಂಸ್ಥೆಗೆ ಪಾವತಿಸುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News