‘ಭವಿಷ್ಯದಲ್ಲಿ ಮಹಿಳೆಯರೂ ದಲಾಯ್ ಲಾಮ ಆಗಲಿದ್ದಾರೆ’

Update: 2018-12-14 17:41 GMT

ಮುಂಬೈ, ಡಿ. 14: ಎರಡು ಲಿಂಗಗಳಿಗೆ ಸಮಾನ ಹಕ್ಕು ನೀಡುವ ಬೌದ್ಧ ಸಂಪ್ರದಾಯ ತುಂಬಾ ಉದಾರವಾದಿ. ಆದುದರಿಂದ ಭವಿಷ್ಯದಲ್ಲಿ ಮಹಿಳೆಯರು ಕೂಡ ದಲಾಯ್ ಲಾಮ ಆಗಲಿದ್ದಾರೆ ಎಂದು ಟಿಬೇಟಿಯನ್ ಧಾರ್ಮಿಕ ನಾಯಕ ದಲಾಯ್ ಲಾಮ ಶುಕ್ರವಾರ ಹೇಳಿದ್ದಾರೆ.

ಮುಂಬೈಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ದಲಾಲಾಮ ಮಾತನಾಡಿದರು.

 ದಲಾಲಾಮಾ ಅವರು ನಿಜವಾದ ಹೆಸರು ಟೆಂಝಿನ್ ಗ್ಯಾಟ್ಸೊ. ಅವರು 1989ರಲ್ಲಿ ನೋಬೆಲ್ ಶಾಂತಿ ಪ್ರಶಸ್ತಿ ಪಡೆದುಕೊಂಡಿದ್ದರು. ಟಿಬೆಟಿಯನರ ಸ್ವಾತಂತ್ರ ಹಾಗೂ ಇತರ ವಿಷಯಗಳನ್ನು ಅವರು ಜಾಗತಿಕವಾಗಿ ಪ್ರತಿಪಾದಿಸಿದ್ದರು.

‘‘15 ವರ್ಷಗಳ ಹಿಂದೆ ಫ್ರಾನ್ಸ್ ಮ್ಯಾಗಝಿನ್‌ನ ಸಂಪಾದಕ ರೊಬ್ಬರು ನನ್ನ ಸಂದರ್ಶನ ಮಾಡಿದ್ದರು. ಈ ಸಂದರ್ಭ ಅವರು ಭವಿಷ್ಯದಲ್ಲಿ ಮಹಿಳಾ ದಲಾಯ್ ಲಾಮ ಆಗಬಹುದೇ ಎಂದು ಪ್ರಶ್ನಿಸಿದ್ದರು. ನಾನು ಹೌದು ಎಂದು ಹೇಳಿದ್ದೆ. ಭವಿಷ್ಯದಲ್ಲಿ ಮಹಿಳಾ ಘಟಕಗಳು ಸಕ್ರಿಯವಾಗಲಿದೆಯೇ ಎಂದು ಪ್ರಶ್ನಿಸಿದರೆ, ಅದು ಕೂಡ ಸತ್ಯವಾಗಲಿದೆ. ಬೌದ್ಧ ಸಂಪ್ರದಾಯ ತುಂಬಾ ಉದಾರವಾದಿ’’ ಎಂದು ಅವರು ಹೇಳಿದರು.

ಮಾನಸಿಕ ಆರೋಗ್ಯ ದೇಹದ ಆರೋಗ್ಯವನ್ನು ಉತ್ತಮವಾಗಿ ಇರಿಸುತ್ತದೆ. ಇದು ತುಂಬಾ ಮುಖ್ಯ ಎಂದು ದಲಾಲಾಮಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News