ಪ್ರೊ ಕಬಡ್ಡಿ: ಪುಣೇರಿ ಪಲ್ಟನ್ ಮಣಿಸಿದ ಪ್ಯಾಂಥರ್ಸ್

Update: 2018-12-14 18:08 GMT

ಪಂಚಕುಲಾ, ಡಿ.14: ದೀಪಕ್ ಹೂಡ ಹಾಗೂ ಸುನೀಲ್ ಸಿದ್ಧಗಾವ್ಳಿ ಅವರ ಅಮೋಘ ತಲಾ 8 ಅಂಕಗಳ ನೆರವಿನಿಂದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಪುಣೇರಿ ಪಲ್ಟನ್‌ನ್ನು 36-23 ಅಂಕಗಳ ಅಂತರದಿಂದ ಮಣಿಸಿದೆ.

ಇಲ್ಲಿಯ ತಾವ್ ದೇವಿಲಾಲ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಕ್ರೀಡಾಂಗಣದಲ್ಲಿ ನಡೆದ ಪ್ರೊ ಕಬಡ್ಡಿ ಟೂರ್ನಿಯ ಪಂದ್ಯದಲ್ಲಿ ಪಿಂಕ್ ಪ್ಯಾಂಥರ್ಸ್ ಅದ್ಭುತ ಪ್ರದರ್ಶನ ನೀಡಿತು. ತಂಡದ ಪರ ಇತರ ಆಟಗಾರರಾದ ಅಮಿತ್ ಕುಮಾರ್ 5, ಅಜಿಂಕ್ಯ ಪವಾರ್ 4 ಅಂಕಗಳನ್ನು ಗಳಿಸಿದರು. ಪರಾಜಿತ ಪುಣೇರಿ ಪಲ್ಟನ್ ತಂಡದ ಪರ ಜಿ.ಬಿ. ಮೋರೆ, ಸಂದೀಪ್ ನರ್ವಾಲ್ ತಲಾ 5, ಹಾಗೂ ಸಂದೀಪ್ 4 ಅಂಕ ಗಳಿಸಿದರು. ಇದೇ ಮೈದಾನದಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ತಂಡವು ತಮಿಳ್ ತಲೈವಾಸ್‌ನ್ನು 28-21ರಿಂದ ಮಣ್ಣು ಮುಕ್ಕಿಸಿತು. ಬೆಂಗಾಲ್ ಪರ ಮಣಿಂದರ್ ಸಿಂಗ್ 7 ಹಾಗೂ ಸುರ್ಜಿತ್‌ಸಿಂಗ್ 6 ಅಂಕ ಗಳಿಸಿದರು. ಪರಾಜಿತ ತಮಿಳ್ ತಲೈವಾಸ್ ಪರ ಅಮಿತ್ ಹೂಡ 8, ಅಜಯ್ ಠಾಕೂರ್ 5 ಹಾಗೂ ಸುಕೇಶ್ ಹೆಗ್ಡೆ 4 ಅಂಕಗಳನ್ನು ತಮ್ಮ ಹೆಸರಿಗೆ ಪಡೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News