ಬಾಂಗ್ಲಾಗೆ ಸರಣಿ ವಿಜಯ

Update: 2018-12-14 18:11 GMT

ಸಿಲೆಟ್, ಡಿ.14: ಮೆಹಿದಿ ಹಸನ್‌ರ ನಾಲ್ಕು ವಿಕೆಟ್ ಗೊಂಚಲು ಹಾಗೂ ತಮೀಮ್ ಇಕ್ಬಾಲ್ ಹಾಗೂ ಸೌಮ್ಯ ಸರ್ಕಾರ್ ಅವರ ಭರ್ಜರಿ ಅರ್ಧಶತಕಗಳ ನೆರವಿನಿಂದ ಮೂರನೇ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ವೆಸ್ಟ್ ಇಂಡೀಸ್‌ನ್ನು 8 ವಿಕೆಟ್‌ಗಳಿಂದ ಮಣಿಸಿದೆ. ಆ ಮೂಲಕ ಮೂರು ಪಂದ್ಯಗಳ ಸರಣಿಯನ್ನು 2-1ರಿಂದ ವಶಕ್ಕೆ ಪಡೆದಿದೆ.

ಟಾಸ್ ಗೆದ್ದ ಬಾಂಗ್ಲಾ ತಂಡ ವಿಂಡೀಸ್‌ನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ವೆಸ್ಟ್ ಇಂಡೀಸ್‌ನ ಚಂದ್ರಪಾಲ್ ಹೇಮರಾಜ್ ಹಾಗೂ ಶಾಯ್ ಹೋಪ್ ಇನಿಂಗ್ಸ್ ಆರಂಭಿಸಿದರು. ಈ ಹಂತದಲ್ಲಿ ದಾಂಡಿಗರು ಪೆವಿಲಿಯನ್‌ಗೆ ಪರೇಡ್ ನಡೆಸಿದರು. ಒಂದೆಡೆ ವಿಕೆಟ್ ಉರುಳುತ್ತಿದ್ದರೂ ನೆಲಕಚ್ಚಿ ನಿಂತ ಶಾಯ್ ಹೋಪ್ ಭರ್ಜರಿ ಶತಕ(ಅಜೇಯ 108, 9 ಬೌಂಡರಿ, 1 ಸಿಕ್ಸರ್) ಸಿಡಿಸಿ ವಿಂಡೀಸ್ 198 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಜಮೆ ಮಾಡಲು ಕಾರಣರಾದರು. ಬಾಂಗ್ಲಾ ಪರ ಮೆಹಿದಿ ಹಸನ್ 29 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು.

199 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಬಾಂಗ್ಲಾಗೆ ವೆಸ್ಟ್ ಇಂಡೀಸ್ ಬೌಲರ್‌ಗಳು ಸವಾಲಾಗಲೇ ಇಲ್ಲ. ತಮೀಮ್ ಇಕ್ಬಾಲ್ (ಅಜೇಯ 80, 9 ಬೌಂಡರಿ), ಲಿಟನ್ ದಾಸ್(23, 5 ಬೌಂಡರಿ) ಹಾಗೂ ಸೌಮ್ಯ ಸರ್ಕಾರ್(80, 5 ಬೌಂಡರಿ, 5 ಸಿಕ್ಸರ್) ಬಾಂಗ್ಲಾವನ್ನು ಸುಲಭ ಗೆಲುವಿನೆಡೆ ಕೊಂಡೊಯ್ದರು. ಬಾಂಗ್ಲಾದ ಎರಡೂ ವಿಕೆಟ್‌ಗಳು ಕೀಮೊ ಪಾಲ್ ಪಾಲಾದವು.

ಸಂಕ್ಷಿಪ್ತ ಸ್ಕೋರ್

►ವಿಂಡೀಸ್: 50 ಓವರ್‌ಗಳಲ್ಲಿ 198/9

(ಹೋಪ್ ಅಜೇಯ 108, ಹಸನ್ 29ಕ್ಕೆ 4)

►ಬಾಂಗ್ಲಾ: 38.3 ಓವರ್‌ಗಳಲ್ಲಿ 202/2 (ತಮೀಮ್ ಅಜೇಯ 81, ಸರ್ಕಾರ್ 80, ಪಾಲ್ 38ಕ್ಕೆ 2)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News