2020ರ ಏಶ್ಯಕಪ್: ಪಾಕ್‌ಆತಿಥ್ಯ

Update: 2018-12-14 18:14 GMT

ಕರಾಚಿ, ಡಿ.14: ಏಶ್ಯನ್ ಕ್ರಿಕೆಟ್ ಕೌನ್ಸಿಲ್(ಎಸಿಸಿ) 2020ರ ಏಶ್ಯಕಪ್ ಆತಿಥ್ಯದ ಹಕ್ಕನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ(ಪಿಸಿಬಿ) ನೀಡಿದೆ. ಟೂರ್ನಿಯ ಫೈನಲ್ ಪಂದ್ಯ ನಡೆಯುವ ಸ್ಥಳದ ಬಗ್ಗೆ ಸ್ಪಷ್ಟತೆಯಿಲ್ಲ. ಫೈನಲ್ ಪಂದ್ಯ ಪಾಕಿಸ್ತಾನ ಅಥವಾ ಯುಎಇನಲ್ಲಿ ನಡೆಯುವ ಸಾಧ್ಯತೆಯಿದೆ.

ಎಸಿಸಿ ಅಧ್ಯಕ್ಷ ನಝ್ಮುಲ್ ಹಸನ್ ಅಧ್ಯಕ್ಷತೆಯಲ್ಲಿ ಬಾಂಗ್ಲಾದೇಶ ರಾಜಧಾನಿ ಢಾಕಾದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

ಟೂರ್ನಮೆಂಟ್ 2020ರ ಸೆಪ್ಟಂಬರ್‌ಗೆ ನಿಗದಿಯಾಗಿದೆ.ಟೂರ್ನಿಯು ಟಿ-20 ಮಾದರಿಯಲ್ಲಿ ನಡೆಯಲಿದೆ. 2020ರ ಟ್ವೆಂಟಿ-20 ವಿಶ್ವಕಪ್ ಪೂರ್ವಭಾವಿಯಾಗಿ ಇದನ್ನು ನಡೆಸಲಾಗುತ್ತದೆ.

2018ರ ಏಶ್ಯಕಪ್ ಭಾರತದಲ್ಲಿ ನಡೆಯಬೇಕಿತ್ತು. ಆದರೆ, ಅದನ್ನು ಯುಎಇಗೆ ಸ್ಥಳಾಂತರಿಸಲಾಗಿತ್ತು. ಫೈನಲ್‌ಗೆ ತಲುಪಿದ್ದ ಭಾರತ ತಂಡ ಬಾಂಗ್ಲಾವನ್ನು 3 ವಿಕೆಟ್‌ಗಳಿಂದ ಸೋಲಿಸಿ ಪ್ರಶಸ್ತಿ ಎತ್ತಿಹಿಡಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News