ರವಿಶಾಸ್ತ್ರಿ ಸಾಧನೆ ಪ್ರಶ್ನಿಸಿದ ಗೌತಮ್ ಗಂಭೀರ್

Update: 2018-12-15 18:14 GMT

ಹೊಸದಿಲ್ಲಿ, ಡಿ.15: ಇತ್ತೀಚೆಗೆ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಎಡಗೈ ದಾಂಡಿಗ ಗೌತಮ್ ಗಂಭೀರ್ ಭಾರತದ ಕೋಚ್ ರವಿ ಶಾಸ್ತ್ರಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಅವರ ಸಾಧನೆಯನ್ನು ಪ್ರಶ್ನಿಸಿದ್ದಾರೆ.

‘‘ಕಳೆದ 15 ವರ್ಷಗಳಲ್ಲಿ ಈಗಿನ ಟೀಮ್ ಇಂಡಿಯಾ ಅತ್ಯಂತ ಶ್ರೇಷ್ಠ ತಂಡವಾಗಿದೆ ಎಂಬ ಶಾಸ್ತ್ರಿ ಅವರ ಹೇಳಿಕೆ ಬಾಲಿಶವಾಗಿದೆ. ಏನೂ ಸಾಧನೆ ಮಾಡದ ವ್ಯಕ್ತಿ ಇಂತಹ ಹೇಳಿಕೆ ನೀಡಲು ಸಾಧ್ಯ. ಶಾಸ್ತ್ರಿ ಅವರು ಆಸ್ಟ್ರೇಲಿಯದಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನ್ನು ಜಯಿಸಿದ ಹೊರತಾಗಿ ಬೇರೆ ಯಾವ ಸಾಧನೆ ಮಾಡಿದ್ದಾರೋ ನನಗೆ ಗೊತ್ತಿಲ್ಲ. ನೀವು ಸ್ವತಃ ಯಾವ ಸಾಧನೆ ಮಾಡದೇ ಇರುವಾಗ ಇಂತಹ ಹೇಳಿಕೆ ನೀಡುವುದನ್ನು ಬಿಡಿ. ಜನರು ಇದನ್ನು ಗಂಭೀರವಾಗಿ ತೆಗೆದುಕೊಳ್ಳಲಾರರು. ಶಾಸ್ತ್ರಿ ಎಲ್ಲ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಿದಂತೆ ಕಾಣುತ್ತಿಲ್ಲ. ಅವರು ಸಾಕಷ್ಟು ಪಂದ್ಯಗಳನ್ನು ನೋಡಿದ್ದರೆ ಇಂತಹ ಮಾತನಾಡುತ್ತಿರಲಿಲ್ಲ’’ ಎಂದು ನೆಟ್‌ವರ್ಕ್-18ಕ್ಕೆ ನೀಡಿದ ಸಂದರ್ಶನದಲ್ಲಿ ಗಂಭೀರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News