ವಾಜಪೇಯಿ, ಸ್ವಾಮಿ ವಿವೇಕಾನಂದ ಮತ್ತು ಅರ್ಚಕರ ಪ್ರತಿಮೆ ಸ್ಥಾಪಿಸಲಿರುವ ಆದಿತ್ಯನಾಥ್ ಸರಕಾರ

Update: 2018-12-16 10:39 GMT

ಲಕ್ನೋ, ಡಿ.16: ರಾಜ್ಯದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಪ್ರತಿಮೆ ಸೇರಿದಂತೆ ನಾಲ್ಕು ಹೊಸ ಪ್ರತಿಮೆಗಳ ಸ್ಥಾಪನೆಗೆ ಆದಿತ್ಯನಾಥ್ ಸರ್ಕಾರ ನಿರ್ಧರಿಸಿದೆ.

ವಾಜಪೇಯಿ ಪ್ರತಿಮೆಯ ಹೊರತಾಗಿ, ಸ್ವಾಮಿ ವಿವೇಕಾನಂದ, ಗೋರಖ್ ಪುರದ ಗೋರಕ್‍ನಾಥ್ ದೇವಸ್ಥಾನದ ಮಾಜಿ ನಿವೃತ್ತ ಅರ್ಚಕರು ಹಾಗೂ ಸಂಸದರಾಗಿದ್ದ ಮಹಾಂತ ಅವೈದ್ಯನಾಥ್ ಮತ್ತು ದಿಗ್ವಿಜಯನಾಥ್ ಅವರ ಪ್ರತಿಮೆಯನ್ನೂ ಸ್ಥಾಪಿಸಲಾಗುತ್ತಿದೆ ಎಂದು ವಿಶೇಷ ಕಾರ್ಯದರ್ಶಿ ಶಿಶಿರ್ ಸಿಂಗ್ ಹೇಳಿದ್ದಾರೆ. ಆದಿತ್ಯನಾಥ್ ಅವರು ಈಗ ಗೋರಕ್‍ ನಾಥ್ ದೇವಾಲಯದ ಮುಖ್ಯ ಅರ್ಚಕರು.

ಅಯೋಧ್ಯೆಯಲ್ಲಿ ಶ್ರೀರಾಮನ 221 ಮೀಟರ್ ಎತ್ತರದ ಪ್ರತಿಮೆ ನಿರ್ಮಿಸುವ ನಿರ್ಧಾರವನ್ನು ಪ್ರಕಟಿಸಿದ ಬೆನ್ನಲ್ಲೇ ಆದಿತ್ಯನಾಥ್ ಸರ್ಕಾರ ಮತ್ತೆ ನಾಲ್ಕು ಪ್ರತಿಮೆಗಳನ್ನು ಸ್ಥಾಪಿಸಲು ಮುಂದಾಗಿದೆ.

ಲಕ್ನೋ ಲೋಕಭವನದಲ್ಲಿ ವಾಜಪೇಯಿಯವರ 25 ಅಡಿ ಎತ್ತರದ ಪ್ರತಿಮೆ ಹಾಗೂ ಉಳಿದ ಮೂವರ ತಲಾ 12.5 ಅಡಿ ಎತ್ತರದ ಪ್ರತಿಮೆಗಳನ್ನು ಸ್ಥಾಪಿಸಲಾಗುತ್ತಿದೆ. ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ರಾಜಭವನದಲ್ಲಿ, ಮಹಾಂತರ ಪ್ರತಿಮೆಗಳನ್ನು ಗೋರಖ್‍ಪುರದಲ್ಲಿ ಪ್ರತಿಷ್ಠಾಪಿಸಲು ನಿರ್ಧರಿಸಲಾಗಿದೆ.

ಪ್ರತಿಮೆ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಇವುಗಳನ್ನು ಪ್ರತಿಷ್ಠಾಪಿಸಲು ಸೂಕ್ತ ಸ್ಥಳಗಳನ್ನು ಸೂಚಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News