ಕಡಿಮೆ ಬೆಲೆಗೆ ಲಭಿಸಿದ್ದರೆ 36ರ ಬದಲು 126 ಯುದ್ಧ ವಿಮಾನ ಏಕೆ ಖರೀದಿಸಿಲ್ಲ: ಜೇಟ್ಲಿಗೆ ಚಿದಂಬರಂ ಪ್ರಶ್ನೆ

Update: 2018-12-16 09:54 GMT

ಹೊಸದಿಲ್ಲಿ, ಡಿ.16: ಎನ್‍ ಡಿಎ ಸರ್ಕಾರ ರಫೇಲ್ ಯುದ್ಧ ವಿಮಾನಗಳನ್ನು ಹಿಂದಿಗಿಂತ ಕಡಿಮೆ ಬೆಲೆಗೆ ಖರೀದಿಸಲು ಒಪ್ಪಂದ ಮಾಡಿಕೊಂಡಿದೆ ಎಂಬ ಹಣಕಾಸು ಸಚಿವ ಅರುಣ್ ಜೇಟ್ಲೆ ಹೇಳಿಕೆಗೆ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಕೇವರ ಎರಡು ಸ್ಕ್ವಾರ್ಡರ್ನ್ ಬದಲಾಗಿ ಏಳು ಯುದ್ಧವಿಮಾನ ಸ್ಕ್ವಾರ್ಡರ್ನ್‍ಗಳನ್ನು ಏಕೆ ಖರೀದಿಸುತ್ತಿಲ್ಲ ಎಂದವರು ಪ್ರಶ್ನಿಸಿದ್ದಾರೆ.

ರಫೇಲ್ ಒಪ್ಪಂದದಡಿ ಎನ್‍ ಡಿಎ ಸರ್ಕಾರ ಹಿಂದೆ ನಿಗದಿಪಡಿಸಿದ ಬೆಲೆಗಿಂತ ಶೇಕಡ 9 ಅಥವಾ ಶೇಕಡ 20ರಷ್ಟು ಕಡಿಮೆ ದರದಲ್ಲಿ ಖರೀದಿಸುತ್ತಿದೆ ಎಂದು ಜೇಟ್ಲಿ ಹೇಳಿರುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

"ಜೇಟ್ಲಿ ಹೇಳುತ್ತಿರುವುದು ನಿಜವಾದರೆ ಕೇವಲ 36 ಯುದ್ಧವಿಮಾನಗಳ ಬದಲಾಗಿ 126 ವಿಮಾನಗಳನ್ನು ಏಕೆ ಖರೀದಿಸುತ್ತಿಲ್ಲ" ಎಂದು ಚಿದಂಬರಂ ಪ್ರಶ್ನಿಸಿದರು.

“ಅಗ್ಗವಾಗಿ ಸಿಗುತ್ತದೆ ಎಂದಾದ ಮೇಲೆ ಕೇವಲ 36 ಯುದ್ಧವಿಮಾನಗಳನ್ನಷ್ಟೇ ಏಕೆ ಖರೀದಿಸಲಾಗುತ್ತಿದೆ ಎಂಬ ನಿಗೂಢ ರಹಸ್ಯವನ್ನು ಯಾರಾದರೂ ಬಯಲುಗೊಳಿಸುತ್ತೀರಾ?” ಎಂದು ಅವರು ಸರಣಿ ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ. 126 ಯುದ್ಧವಿಮಾನಗಳ ಬದಲಾಗಿ ಕೇವಲ 36 ಯುದ್ಧವಿಮಾನ ಖರೀದಿಸುವ ಮೂಲಕ ಎನ್‍ಡಿಎ ಸರ್ಕಾರ ದೇಶದ ಭದ್ರತೆ ವಿಚಾರದಲ್ಲಿ ರಾಜಿ ಮಾಡಿಕೊಂಡಿದೆ ಎಂದು ಅವರು ಆಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News