ಚುಡಾಯಿಸಿದ್ದನ್ನು ಪ್ರಶ್ನಿಸಿದ ಮಹಿಳೆಗೆ ಗಂಪಿನಿಂದ ಥಳಿತ

Update: 2018-12-16 17:06 GMT

ಲಕ್ನೊ, ಡಿ.16: ಹತ್ತು ಜನರಿದ್ದ ಗುಂಪೊಂದು ತನ್ನನ್ನು ಚುಡಾಯಿಸಿದ್ದನ್ನು ಪ್ರತಿಭಟಿಸಿ ಪ್ರಶ್ನಿಸಿದ ಮಹಿಳೆಗೆ ಕಿರುಕುಳ ನೀಡಿ ಥಳಿಸಿದ ಘಟನೆ ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಝಿಂಝಾನಾ ಪ್ರದೇಶದ ಮಚ್ರೌಲಿ ನಗರದಲ್ಲಿ ಶನಿವಾರ ಘಟನೆ ಸಂಭವಿಸಿದೆ. ಗುಂಪೊಂದು ತನ್ನನ್ನು ಚುಡಾಯಿಸಿದ್ದನ್ನು ಮಹಿಳೆ ಪ್ರಶ್ನಿಸಿದಾಗ, ಮಹಿಳೆ ಹಾಗೂ ಆಕೆಯ ಕುಟುಂಬದ ಸದಸ್ಯರ ಮೇಲೆ ಹರಿತವಾದ ಆಯುಧಗಳಿಂದ ಧಾಳಿ ನಡೆಸಿ ಥಳಿಸಿದ್ದಾರೆ . ಆರೋಪಿಗಳು ತಲೆಮರೆಸಿಕೊಂಡಿದ್ದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News