ವಿರಾಟ್ ಕೊಹ್ಲಿ ‘ವಿಶ್ವದ ಅತೀ ಕೆಟ್ಟ ವರ್ತನೆಯ ಆಟಗಾರ’ ಎಂದ ಪ್ರಸಿದ್ಧ ಬಾಲಿವುಡ್ ನಟ

Update: 2018-12-17 16:07 GMT

ಹೊಸದಿಲ್ಲಿ, ಡಿ.17: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ‘ವಿಶ್ವದ ಅತೀ ಕೆಟ್ಟ ವರ್ತನೆಯ ಆಟಗಾರ’ ಎಂದು ಬಾಲಿವುಡ್ ನ ಪ್ರಸಿದ್ಧ ನಟ ನಾಸಿರುದ್ದೀನ್ ಶಾ ಹೇಳಿರುವುದು ವಿವಾದ ಸೃಷ್ಟಿಸಿದೆ.

ಈ ಬಗ್ಗೆ ಫೇಸ್ ಬುಕ್ ಪೋಸ್ಟ್ ಮಾಡಿದ್ದ ನಾಸಿರುದ್ದೀನ್ ಶಾ, “ವಿರಾಟ್ ಕೊಹ್ಲಿ ಶ್ರೇಷ್ಟ ಬ್ಯಾಟ್ಸ್ ಮೆನ್ ಮಾತ್ರವಲ್ಲ, ವಿಶ್ವದ ಅತೀ ಕೆಟ್ಟ ವರ್ತನೆಯ ಆಟಗಾರನೂ ಹೌದು” ಎಂದಿದ್ದರು. ವಿದೇಶಿ ಆಟಗಾರರನ್ನು ಇಷ್ಟಪಡುವುದಾದರೆ ದೇಶ ತೊರೆಯಬಹುದು ಎಂದು ಕೊಹ್ಲಿ ಅಭಿಮಾನಿಯೊಬ್ಬರಿಗೆ ಮಾಡಿದ್ದ ಕಾಮೆಂಟ್ ಗೆ ನಾಸಿರುದ್ದೀನ್ ಈ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗುತ್ತಿದೆ.

ನಾಸಿರುದ್ದೀನ್ ರ ಈ ಪೋಸ್ಟ್ ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕೆಲವರು ನಾಸಿರುದ್ದೀನ್ ಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಇದು ಸರಿಯಾದ ಹೇಳಿಕೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News