ಆಸ್ಟ್ರೇಲಿಯದಲ್ಲಿ 4ನೇ ಶ್ರೇಷ್ಠ ಪ್ರದರ್ಶನ ನೀಡಿದ ಶಮಿ

Update: 2018-12-17 18:22 GMT

ಪರ್ತ್, ಡಿ.17: ಭಾರತದ ವೇಗದ ಬೌಲರ್ ಮುಹಮ್ಮದ್ ಶಮಿ ಆಸ್ಟ್ರೇಲಿಯ ವಿರುದ್ಧ ಎರಡನೇ ಇನಿಂಗ್ಸ್‌ನಲ್ಲಿ ನಥಾನ್ ಲಿಯೊನ್ ವಿಕೆಟ್ ಉರುಳಿಸುವುದರೊಂದಿಗೆ ಜೀವನಶ್ರೇಷ್ಠ ಬೌಲಿಂಗ್(56ಕ್ಕೆ6) ಸಂಘಟಿಸಿದರು. ಶಮಿ ಆಸ್ಟ್ರೇಲಿಯದಲ್ಲಿ ಶ್ರೇಷ್ಠ ಬೌಲಿಂಗ್ ಮಾಡಿದ ಭಾರತದ ನಾಲ್ಕನೇ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಭಾರತದ ಮಾಜಿ ನಾಯಕ ಕಪಿಲ್‌ದೇವ್ 1985ರಲ್ಲಿ ಅಡಿಲೇಡ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಶ್ರೇಷ್ಠ ಬೌಲಿಂಗ್(106 ರನ್‌ಗೆ 8 ವಿಕೆಟ್)ಮಾಡಿದ್ದರು. ಅಜಿತ್ ಅಗರ್ಕರ್ 2003ರಲ್ಲಿ ಅಡಿಲೇಡ್‌ನಲ್ಲೇ 41 ರನ್‌ಗೆ 6 ವಿಕೆಟ್ ಕಬಳಿಸಿದ್ದರು. 1977-78ರಲ್ಲಿ ಅಬಿದ್ ಅಲಿ ಆರು ವಿಕೆಟ್‌ಗಳನ್ನು(6/55) ಕಬಳಿಸಿ ಉತ್ತಮ ಸಾಧನೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News