ಮೋದಿ ಪ್ರಚಾರ ಮಾಡಿದ್ದ ಶೇ.70 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿಗೆ ಸೋಲು

Update: 2018-12-18 16:38 GMT

ಮುಂಬೈ,ಡಿ.18: ಇತ್ತೀಚೆಗೆ ನಡೆದ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ನಡೆಸಿದ ಶೇ.70 ಕ್ಷೇತ್ರಗಳಲ್ಲಿ ಬಿಜೆಪಿ ಸೋಲನುಭವಿಸಿದೆ ಎಂದು ಇಂಡಿಯಾಸ್ಪೆಂಡ್ ನಡೆಸಿದ ಚುನಾವಣಾ ಅಂಕಿಅಂಶಗಳ ವಿಶ್ಲೇಷಣೆ ಬಹಿರಂಗಪಡಿಸಿದೆ.

ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸ್‌ಗಡ, ತೆಲಂಗಾಣ ಮತ್ತು ಮಿಝೊರಾಂನಲ್ಲಿ ವಿಧಾನಸಭೆ ಚುನಾವಣೆ ನಡೆದಿತ್ತು. ಈ ರಾಜ್ಯಗಳಲ್ಲಿ ಒಟ್ಟಾರೆ 80 ಕ್ಷೇತ್ರಗಳ 30 ಸ್ಥಳಗಳಲ್ಲಿ ಮೋದಿ ಪ್ರಚಾರ ನಡೆಸಿದ್ದರು. ಈ ಪೈಕಿ ಬಿಜೆಪಿ 23ರಲ್ಲಿ ಗೆಲುವು ಸಾಧಿಸಿದ್ದು 57ರಲ್ಲಿ ಸೋಲುಂಡಿದೆ. ಅಂಕಿಅಂಶಗಳ ಪ್ರಕಾರ, ಈ ಚುನಾವಣೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿ ಹೊರಹೊಮ್ಮಿದ್ದಾರೆ.

ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸ್‌ಗಡ ಮತ್ತು ತೆಲಂಗಾಣದಲ್ಲಿ ಆದಿತ್ಯನಾಥ್ 58 ರ್ಯಾಲಿಗಳನ್ನು ನಡೆಸಿದ್ದರು. ಈ ಪೈಕಿ ಬಿಜೆಪಿ 27 ಸ್ಥಾನಗಳನ್ನು ಗೆದ್ದರೆ 42 ಸ್ಥಾನಗಳಲ್ಲಿ ಸೋತಿದೆ. ಮೋದಿಯ ಜಯದ ಸರಾಸರಿ ಶೇ.28.75 ಆಗಿದ್ದರೆ ಆದಿತ್ಯನಾಥ್ ಶೇ.39.13 ಸರಾಸರಿಯೊಂದಿಗೆ ಪ್ರಧಾನಿಯನ್ನೇ ಹಿಂದಿಕ್ಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News