ಒಪ್ಪಂದರಹಿತ ಬ್ರೆಕ್ಸಿಟ್‌ಗೆ ತೆರೇಸಾ ಸಿದ್ಧತೆ

Update: 2018-12-18 16:41 GMT

ಲಂಡನ್, ಡಿ. 18: ಬ್ರಿಟನ್ ಪ್ರಧಾನಿ ತೆರೇಸಾ ಮೇ ಅವರ ಬ್ರೆಕ್ಸಿಟ್ (ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಗೆ ಬರುವುದು) ಒಪ್ಪಂದಕ್ಕೆ ಸಂಸತ್ತಿನಲ್ಲಿ ಅನುಮೋದನೆ ಸಿಗುವ ಸಾಧ್ಯತೆ ಕ್ಷೀಣಿಸಿರುವ ಹಿನ್ನೆಲೆಯಲ್ಲಿ, ಮುಂದಿನ ಪರಿಣಾಮಗಳನ್ನು ಎದುರಿಸಲು ತೆರೇಸಾ ಸಿದ್ಧತೆಗಳನ್ನು ನಡೆಸಿದ್ದಾರೆ.

100 ದಿನಗಳ ಬ್ರೆಕ್ಸಿಟ್ ಕ್ಷಣಗಣನೆ ಈಗಾಗಲೇ ಆರಂಭವಾಗಿದೆ. ಬ್ರಿಟನ್ ಐರೋಪ್ಯ ಒಕ್ಕೂಟದಿಂದ 2019 ಮಾರ್ಚ್ 29ರ ಒಳಗೆ ಹೊರಬರಬೇಕಾಗಿದೆ.

ಒಂದು ವೇಳೆ, ಯಾವುದೇ ಒಪ್ಪಂದ ಇಲ್ಲದೆ ಬ್ರಿಟನ್ ಐರೋಪ್ಯ ಒಕ್ಕೂಟದಿಂದ ಹೊರಬರಬೇಕಾದ ಪರಿಸ್ಥಿತಿ ಏರ್ಪಟ್ಟರೆ, ಪರಿಸ್ಥಿತಿಯನ್ನು ನಿಭಾಯಿಸುವುದಕ್ಕಾಗಿ ತೆರೇಸಾ ಸರಕಾರವು ವಿವಿಧ ಇಲಾಖೆಗಳಿಗೆ 2 ಬಿಲಿಯ ಪೌಂಡ್ (ಸುಮಾರು 17,900 ಕೋಟಿ ರೂಪಾಯಿ) ಹೆಚ್ಚುವರಿ ನಿಧಿಯನ್ನು ಬಿಡುಗಡೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News