ಸೌರವ್ಯೂಹದ ಅತ್ಯಂತ ದೂರದ ವಸ್ತು ಪತ್ತೆ

Update: 2018-12-18 16:44 GMT

ವಾಶಿಂಗ್ಟನ್, ಡಿ. 18: ನಮ್ಮ ಸೌರವ್ಯೂಹದ ಅತ್ಯಂತ ದೂರದ ವಸ್ತುವೊಂದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.

ಸ್ಕಾಟ್ ಎಸ್. ಶೆಫರ್ಡ್, ಡೇವಿಡ್ ತೋಲನ್ ಮತ್ತು ಚಾಡ್ ಟ್ರುಜಿಲೊ ಅವರನ್ನೊಳಗೊಂಡ ವಿಜ್ಞಾನಿಗಳ ತಂಡವು ಈ ವಸ್ತುವಿಗೆ ‘2018ವಿಜಿ18’ ಎಂಬ ತಾತ್ಕಾಲಿಕ ಹೆಸರು ಕೊಟ್ಟಿದ್ದಾರೆ. ಅದನ್ನು ‘ಫರೌಟ್’ ಎಂಬ ಅಡ್ಡ ಹೆಸರಿನಿಂದಲೂ ಕರೆಯಲಾಗುತ್ತಿದೆ.

ಅದು ಭೂಮಿಯಿಂದ 120 ಆಸ್ಟ್ರೋನೋಮಿಕಲ್ ಯೂನಿಟ್ (ಎಯು) ದೂರದಲ್ಲಿದೆ. ಒಂದು ಆಸ್ಟ್ರೋನೋಮಿಕಲ್ ಯೂನಿಟ್ ಅಂದರೆ ಭೂಮಿ ಮತ್ತು ಸೂರ್ಯನ ನಡುವಿನ ಅಂತರ.

ಭೂಮಿಯಿಂದ ಎರಡನೇ ಅತಿ ದೂರದಲ್ಲಿರುವ ಸೌರವ್ಯೂಹದ ವಸ್ತು ‘ಎರಿಸ್’. ಅದು ಸುಮಾರು 96 ಎಯು ದೂರದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News