ಟ್ವಿಟರ್ ಮಹಿಳೆಯರಿಗೆ ಅಪಾಯಕಾರಿ ಸ್ಥಳ: ಆ್ಯಮ್ನೆಸ್ಟಿ

Update: 2018-12-18 16:47 GMT

ಕ್ಯಾಲಿಫೋರ್ನಿಯ, ಡಿ. 18: ಟ್ವಿಟರ್ ಮಹಿಳೆಯರಿಗೆ ಅಪಾಯಕಾರಿ ಸ್ಥಳವಾಗಿದೆ ಎಂದು ಅಂತಾರಾಷ್ಟ್ರೀಯ ಮಾನವಹಕ್ಕುಗಳ ಸಂಘಟನೆ ‘ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್’ ಹೇಳಿದೆ.

ಸರಕಾರ ಮತ್ತು ಪತ್ರಿಕೋದ್ಯಮ ಕ್ಷೇತ್ರಗಳಲ್ಲಿರುವ ಪ್ರಮುಖ ಮಹಿಳೆಯರು ಸ್ವೀಕರಿಸುವ ಸುಮಾರು 7 ಶೇಕಡ ಟ್ವೀಟ್‌ಗಳು ನಿಂದನಾತ್ಮಕ ಹಾಗೂ ದೋಷಪೂರಿತವಾಗಿವೆ ಎಂದು ಆ್ಯಮ್ನೆಸ್ಟಿ ನಡೆಸಿದ ಅಧ್ಯಯನವೊಂದು ತಿಳಿಸಿದೆ.

ಅದರಲ್ಲೂ, ವರ್ಣೀಯ ಮಹಿಳೆಯರು ಬಿಳಿಯ ಮಹಿಳೆಯರಿಗಿಂತ 34 ಶೇಕಡ ಹೆಚ್ಚು ನಿಂದನೆಗೆ ಒಳಗಾಗುತ್ತಾರೆ.

ಅದೂ ಅಲ್ಲದೆ, ಕರಿಯ ಮಹಿಳೆಯರು ಬಿಳಿಯ ಮಹಿಳೆಯರಿಗೆ ಹೋಲಿಸಿದರೆ ಟ್ವಿಟರ್‌ನಲ್ಲಿ 84 ಶೇಕಡ ಹೆಚ್ಚಿನ ನಿಂದನೆಗೆ ಗುರಿಯಾಗುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News