ವ್ಯಂಗ್ಯ ಚಿತ್ರಗಳು ನೋಯಿಸಬಾರದು: ಪ್ರಧಾನಿ ಮೋದಿ

Update: 2018-12-18 16:52 GMT

ಮುಂಬೈ, ಡಿ. 17: ವ್ಯಂಗ್ಯ ಚಿತ್ರಗಳು ನೋಯಿಸಬಾರದು. ಆದರೆ, ಅದು ಗುಣಪಡಿಸುವ ಶಕ್ತಿ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ‘ಸಾಮಾನ್ಯ ಮನುಷ್ಯ’ ವ್ಯಂಗ್ಯಚಿತ್ರದ ಮೂಲಕ ಜನಪ್ರಿಯರಾಗಿದ್ದ ವ್ಯಂಗ್ಯಚಿತ್ರಕಾರ ಆರ್.ಕೆ. ಲಕ್ಷ್ಮಣ್ ಅವರ ಬದುಕಿನ ಕುರಿತು ಕಾಫಿ ಟೇಬಲ್ ಬುಕ್ ‘ಟೈಮ್‌ಲೆಸ್ ಲಕ್ಷ್ಮಣ್’ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನವಿಸ್ ಹಾಗೂ ರಾಜ್ಯಪಾಲ ಸಿ. ವಿದ್ಯಾಸಾಗರ್ ಉಪಸ್ಥಿತರಿದ್ದರು. ‘‘ವ್ಯಂಗ್ಯ ಚಿತ್ರದ ಮೂಲಕ ಸಾಮಾಜಿಕ- ರಾಜಕೀಯ ಚರಿತ್ರೆಯ ಕೇಸ್ ಸ್ಟಡಿ ಮಾಡಲು ರಾಜ್ಯದ ಯಾವುದಾದರೂ ವಿಶ್ವವಿದ್ಯಾನಿಲಯಗಳಲ್ಲಿ ಸಾಧ್ಯವಿದೆಯೇ ಎಂಬುದನ್ನು ಪರಿಶೀಲಿಸಿ ಎಂದು ಮುಖ್ಯಮಂತ್ರಿ ಪಡ್ನವಿಸ್ ಅವರಲ್ಲಿ ನಾನು ಹೇಳಲು ಬಯಸುತ್ತೇನೆ’’ ಎಂದು ಮೋದಿ ಹೇಳಿದರು. ಇದಕ್ಕೆ ಮೂಲವಾಗಿ ಆರ್.ಕೆ. ಲಕ್ಷ್ಮಣ್ ಅವರ ವ್ಯಂಗ್ಯಚಿತ್ರಗಳನ್ನು ಇರಿಸಿಕೊಳ್ಳಬೇಕು. ಲಕ್ಷ್ಮಣ್ ಅವರ ವ್ಯಂಗ್ಯಚಿತ್ರಗಳು ಸಮಾಜ ವಿಜ್ಞಾನವನ್ನು ಸುಲಭ ರೀತಿಯಲ್ಲಿ ಬೋಧಿಸಿದೆ ಎಂದು ಅವರು ಹೇಳಿದರು.

ಲಕ್ಷ್ಮಣ್ ಅವರು ಕೇವಲ ಓರ್ವ ವ್ಯಕ್ತಿ ಅಲ್ಲ. ಕೋಟ್ಯಂತರ ಸಾಮಾನ್ಯ ಜನರು ಹಾಗೂ ಅವರ ಹೃದಯಗಳನ್ನು ಒಟ್ಟಾಗಿ ಬೆಸೆದ ಮೂಲಭೂತ ದಾರ ಎಂದು ಮೋದಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News