ಮ್ಯಾಥ್ಯೂಸ್-ಮೆಂಡಿಸ್ ದಾಖಲೆ ಜೊತೆಯಾಟ

Update: 2018-12-18 18:07 GMT

ವೆಲ್ಲಿಂಗ್ಟನ್, ಡಿ.18: ಶ್ರೀಲಂಕಾದ ಮಾಜಿ ನಾಯಕ ಆ್ಯಂಜೆಲೊ ಮ್ಯಾಥ್ಯೂಸ್ ಮತ್ತೊಮ್ಮೆ ತಂಡದ ರಕ್ಷಣೆಗೆ ಧಾವಿಸಿದ್ದಾರೆ. ಕಿವೀಸ್ ವಿರುದ್ಧ ಇಲ್ಲಿ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಅವರು ಹಾಗೂ ಕುಶಾಲ್ ಮೆಂಡಿಸ್ ಗಳಿಸಿದ ಅಜೇಯ ಶತಕಗಳ ನೆರವಿನಿಂದ ನ್ಯೂಝಿಲೆಂಡ್ ಗೆಲುವಿಗೆ ಅಡ್ಡಗಾಲು ಹಾಕಲಾರಂಭಿಸಿದ್ದಾರೆ. ಸದ್ಯ ಲಂಕಾ 3 ವಿಕೆಟ್ ಕಳೆದುಕೊಂಡು 259 ರನ್ ಗಳಿಸಿದೆ.

ಸೋಮವಾರ ತನ್ನ ಎರಡನೇ ಇನಿಂಗ್ಸ್ ಆರಂಭಿಸಿದ್ದ ಶ್ರೀಲಂಕಾ ಮೂರು ವಿಕೆಟ್ ಕಳೆದುಕೊಂಡು 20 ರನ್ ಗಳಿಸಿ ಸಂಕಷ್ಟದಲ್ಲಿತ್ತು. ಪಂದ್ಯದ ನಾಲ್ಕನೇ ದಿನವಾದ ಮಂಗಳವಾರ ಆಟ ಮುಂದುವರಿಸಿದ ಲಂಕೆಗೆ ಮ್ಯಾಥ್ಯೂಸ್(ಅಜೇಯ 117, 293 ಎಸೆತ, 11 ಬೌಂಡರಿ) ಹಾಗೂ ಮೆಂಡಿಸ್(ಅಜೇಯ 116, 287 ಎಸೆತ 12 ಬೌಂಡರಿ) ಬರೋಬ್ಬರಿ 246 ರನ್‌ಗಳ ಜೊತೆಯಾಟ ಬೆಳೆಸಿ, ಜೀವ ತುಂಬಿದರು. ಈ ಮ್ಯಾರಥಾನ್ ಇನಿಂಗ್ಸ್ ನ್ಯೂಝಿಲೆಂಡ್ ವಿರುದ್ಧ ಲಂಕಾ ತಂಡದ ಯಾವುದೇ ವಿಕೆಟ್‌ಗೆ ದಾಖಲಿಸಿದ ಅತ್ಯುತ್ತಮ ಜೊತೆಯಾಟವಾಗಿ ಮೂಡಿ ಬಂದಿತು. 2008, ಫೆ.29ರಂದು ಬಾಂಗ್ಲಾ ಹಾಗೂ ದ.ಆಫ್ರಿಕಾ ತಂಡಗಳ ನಡುವೆ ನಡೆದ ಮೊದಲ ದಿನದಾಟ ಒಂದೂ ವಿಕೆಟ್ ಬೀಳದೆ ಕೊನೆಗೊಂಡಿತ್ತು.ಅದಾದ ನಂತರ ಒಂದೂ ವಿಕೆಟ್ ಬೀಳದೆ ಸಂಪೂರ್ಣ ದಿನದಾಟ ಕೊನೆಗೊಂಡಿರುವುದು ಇದೇ ಮೊದಲು. ಹತಾಶೆಗೊಂಡಿದ್ದ ನ್ಯೂಝಿಲೆಂಡ್ ಬೌಲರ್‌ಗಳು ಶಾರ್ಟ್ ಪಿಚ್ ಎಸೆತಗಳನ್ನು ಹಾಕಿದರೂ ನಂತರ ಫುಲ್ಲರ್ ಲೆಂಗ್ತ್ ಎಸೆತಗಳಿಗೆ ಮೊರೆ ಹೋದರು.

ಸ್ಕೋರ್ ವಿವರ

►ಶ್ರೀಲಂಕಾ ಪ್ರಥಮ ಇನಿಂಗ್ಸ್: 282 ಆಲೌಟ್

►ನ್ಯೂಝಿಲೆಂಡ್ ಪ್ರಥಮ ಇನಿಂಗ್ಸ್: 578 ಆಲೌಟ್( ಲಥಮ್ ಅಜೇಯ 264, ವಿಲಿಯಮ್ಸನ್ 91, ಟೇಲರ್ 50, ನಿಕೋಲ್ಸ್ 50, ಕುಮಾರ 127ಕ್ಕೆ 4)

►ಶ್ರೀಲಂಕಾ ದ್ವಿತೀಯ ಇನಿಂಗ್ಸ್ : 259ಕ್ಕೆ 3( ಆ್ಯಂಜೆಲೊ ಮ್ಯಾಥ್ಯೂಸ್ ಅಜೇಯ 117, ಕುಶಾಲ್ ಮೆಂಡಿಸ್ ಅಜೇಯ 116)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News