ಝಹೀರ್ ಖಾನ್ ಮುಂಬೈ ತಂಡದ ಕ್ರಿಕೆಟ್ ಕಾರ್ಯ ನಿರ್ವಹಣಾ ನಿರ್ದೇಶಕ

Update: 2018-12-18 18:12 GMT

ಮುಂಬೈ, ಡಿ.18: ಮುಂಬರುವ ಐಪಿಎಲ್ ಟೂರ್ನಿಗೆ ಭಾರತ ತಂಡದ ಮಾಜಿ ವೇಗದ ಬೌಲರ್ ಝಹೀರ್ ಖಾನ್‌ರನ್ನು ಮುಂಬೈ ಇಂಡಿಯನ್ಸ್ ತಂಡ ಕ್ರಿಕೆಟ್ ಕಾರ್ಯಚಟುವಟಿಕೆಗಳ ನಿರ್ದೇಶಕರನ್ನಾಗಿ ನೇಮಿಸಿದೆ.

ಜೈಪುರದಲ್ಲಿ ಮಂಗಳವಾರ ನಡೆದ 2019ರ ಐಪಿಎಲ್ ಹರಾಜಿಗೆ ಮುಂಬೈ ಇಂಡಿಯನ್ಸ್ ತಂಡದ ಮಾಲಕರಾದ ನೀತಾ ಅಂಬಾನಿ ಹಾಗೂ ಆಕಾಶ್ ಅಂಬಾನಿ ಅವರೊಂದಿಗೆ ಝಹೀರ್ ಪಾಲ್ಗೊಂಡಿದ್ದಾರೆ. 2009, 2010 ಹಾಗೂ 2014ರಲ್ಲಿ ಮುಂಬೈ ಇಂಡಿಯನ್ಸ್ ನಲ್ಲಿ ಆಡಿದ ತರುವಾಯ ಝಹೀರ್ ಅವರು ಈಗ ತಂಡದ ನಿರ್ದೇಶಕರಾಗಿ ನೇಮಕವಾಗಿದ್ದಾರೆ.

‘‘ಮುಂಬೈ ಇಂಡಿಯನ್ಸ್ ಔಪಚಾರಿಕವಾಗಿ ತನ್ನದೇ ತಂಡದ ಮಾಜಿ ಎಡಗೈ ವೇಗಿಯನ್ನು ಕ್ರಿಕೆಟ್ ಕಾರ್ಯಚಟುವಟಿಕೆಗಳ ನಿರ್ದೇಶಕರನ್ನಾಗಿ ನೇಮಿಸಿದೆ’’ ಎಂದು ಮುಂಬೈ ತಂಡ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ. ಮತ್ತೆ ತಂಡ ಸೇರಿಕೊಳ್ಳುತ್ತಿರುವುದಕ್ಕೆ ಝಹೀರ್ ಟ್ವಿಟರ್‌ನಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News