ಆಸೀಸ್ ತಂಡದಲ್ಲಿ ಬದಲಾವಣೆ ಇಲ್ಲ

Update: 2018-12-18 18:13 GMT

ಪರ್ತ್, ಡಿ.18: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಇನ್ನುಳಿದ ಎರಡು ಪಂದ್ಯಗಳಿಗೆ ಆಸ್ಟ್ರೇಲಿಯಾ ಆಯ್ಕೆ ಸಮಿತಿ ಮಂಗಳವಾರ ಪರ್ತ್‌ನಲ್ಲಿ ವಿಜಯ ಸಾಧಿಸಿದ 13 ಸದಸ್ಯರ ತಂಡವನ್ನೇ ಉಳಿಸಿಕೊಳ್ಳಲು ನಿರ್ಧರಿಸಿದ್ದು, ಯಾವುದೇ ಬದಲಾವಣೆ ಮಾಡಿಲ್ಲ.

ಚೆಂಡು ವಿರೂಪ ಪ್ರಕರಣದ ನಂತರ ಮೊದಲ ಬಾರಿ ಕಾಂಗರೂ ಪಡೆ ಟೆಸ್ಟ್ ಪಂದ್ಯ ಜಯಿಸಿದೆ. ಇನ್ನು ಎರಡೂ ತಂಡಗಳು ಬಾಕ್ಸಿಂಗ್ ಡೇ ಟೆಸ್ಟ್‌ಗೆ ಸಜ್ಜಾಗಲಿವೆ.

►ಆಸ್ಟ್ರೇಲಿಯ ತಂಡ: ಟಿಮ್ ಪೇನ್(ನಾಯಕ, ವಿಕೆಟ್ ಕೀಪರ್), ಆ್ಯರೊನ್ ಫಿಂಚ್, ಪ್ಯಾಟ್ ಕಮಿನ್ಸ್, ಪೀಟರ್ ಹ್ಯಾಂಡ್ಸ್‌ಕಾಂಬ್, ಮಾರ್ಕಸ್ ಹ್ಯಾರಿಸ್, ಜೋಶ್ ಹೆಝಲ್‌ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖ್ವಾಜಾ, ನಥಾನ್ ಲಿಯೊನ್, ಮಿಚೆಲ್ ಮಾರ್ಷ್, ಶಾನ್ ಮಾರ್ಷ್, ಮಿಚೆಲ್ ಸ್ಟಾರ್ಕ್, ಪೀಟರ್ ಸಿಡ್ಲ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News