ಆಟಗಾರ್ತಿಯರಿಗೆ ವೃತ್ತಿಪರ ಗುತ್ತಿಗೆ ಕೊಡುಗೆ: ಐರ್ಲೆಂಡ್ ಕ್ರಿಕೆಟ್ ಮಂಡಳಿ

Update: 2018-12-18 18:14 GMT

ಡಬ್ಲಿನ್, ಡಿ.18: ತನ್ನ ದೇಶದ ಮಹಿಳಾ ಕ್ರಿಕೆಟಿಗರಿಗೆ ಮೊದಲ ಬಾರಿಗೆ ವೃತ್ತಿಪರ ಗುತ್ತಿಗೆಯ ಕೊಡುಗೆ ನೀಡಲು ಐರ್ಲೆಂಡ್ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ. ಕಳೆದ ವಾರ ಈ ಕುರಿತು ಶಿಫಾರಸನ್ನು ಸ್ವೀಕರಿಸಿದ್ದ ಮಂಡಳಿ ಸದ್ಯ ಅದಕ್ಕೆ ಅನುಮೋದನೆ ನೀಡಿದೆ.

‘‘ಇದು ನಮ್ಮ ಹಲವು ವರ್ಷಗಳ ಕನಸಾಗಿತ್ತು. ನಮ್ಮ ಕ್ರೀಡೆಯನ್ನು ಮುಂದಕ್ಕೆ ಕೊಂಡೊಯ್ಯಲು ಈ ಬೆಳವಣಿಗೆ ಅಗತ್ಯವಾಗಿತ್ತು’’ ಎಂದು ಕ್ರಿಕೆಟ್ ಐರ್ಲೆಂಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾರೆನ್ ಡ್ಯೂಟ್ರೋಮ್ ತಿಳಿಸಿದ್ದಾರೆ.

2021ರ ನಂತರ ಅಂತರ್‌ರಾಷ್ಟ್ರೀಯ ಮಹಿಳಾ ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ತಂಡಗಳ ಮಿತಿಯನ್ನು 8ರಿಂದ 10ಕ್ಕೆ ಏರಿಸುವುದಾಗಿ ಐಸಿಸಿ ಹೇಳಿದೆ. ಸದ್ಯ ವಿಶ್ವ ಮಹಿಳಾ ಕ್ರಿಕೆಟ್ ರ್ಯಾಂಕಿಂಗ್‌ನಲ್ಲಿ 10ನೇ ಸ್ಥಾನದಲ್ಲಿರುವ ಐರ್ಲೆಂಡ್, ಚಾಂಪಿಯನ್‌ಶಿಪ್‌ಗೆ ಅರ್ಹತೆ ಗಳಿಸಲು ಪ್ರಯತ್ನಿಸಲಿದ್ದು, ಈ ಕಾರಣಕ್ಕಾಗಿ ತಂಡಕ್ಕೆ ಪ್ರೋತ್ಸಾಹ ನೀಡಲು ಕ್ರಿಕೆಟ್ ಮಂಡಳಿ ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News