ಚೀನಾ, ರಶ್ಯ ಎದುರಿಸಲು ಜಪಾನ್ ನ ‘ಅದೃಶ್ಯ ವಿಮಾನ’

Update: 2018-12-19 15:49 GMT

ಟೋಕಿಯೊ, ಡಿ. 18: ಪಶ್ಚಿಮ ಪೆಸಿಫಿಕ್ ವಲಯದಲ್ಲಿ ಚೀನಾದ ಸೇನೆಯನ್ನು ಎದುರಿಸಲು ಅಮೆರಿಕದ ಪಡೆಗಳಿಗೆ ನೆರವು ನೀಡುವುದಕ್ಕಾಗಿ ಮುಂದಿನ 5 ವರ್ಷಗಳಲ್ಲಿ ಆಧುನಿಕ ಅದೃಶ್ಯ ಯುದ್ಧವಿಮಾನಗಳು, ದೀರ್ಘವ್ಯಾಪ್ತಿಯ ಕ್ಷಿಪಣಿಗಳು ಮತ್ತು ಇತರ ಉಪಕರಣಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಲು ಜಪಾನ್ ನಿರ್ಧರಿಸಿದೆ.

ಚೀನಾ ಮತ್ತು ರಶ್ಯಗಳ ಸೇನಾ ಹೆಚ್ಚಳವು ಜಪಾನ್ ಮೇಲೆ ಒತ್ತಡವನ್ನು ಹೇರಿರುವ ಹಿನ್ನೆಲೆಯಲ್ಲಿ, ಪ್ರಾದೇಶಿಕ ಶಕ್ತಿಯಾಗಿ ಹೊರಹೊಮ್ಮುವ ಜಪಾನ್‌ನ ಮಹತ್ವಾಕಾಂಕ್ಷೆಯನ್ನು ಈ ನಿರ್ಧಾರ ಬಿಂಬಿಸಿದೆ.

ಜಪಾನ್‌ನ ಇತ್ತೀಚಿನ ಸೇನಾ ಕಾರ್ಯಕ್ರಮಗಳ ಮೇಲೆ ಅಮೆರಿಕ, ಚೀನಾ, ಉತ್ತರ ಕೊರಿಯ ಮತ್ತು ರಶ್ಯಗಳು ಅತಿ ಹೆಚ್ಚಿನ ಪರಿಣಾಮ ಬೀರಿವೆ ಎಂದು ಪ್ರಧಾನಿ ಶಿಂಝೊ ಅಬೆ ನೇತೃತ್ವದ ಸರಕಾರದ 10 ವರ್ಷಗಳ ರಕ್ಷಣಾ ಮುನ್ನೋಟ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News