×
Ad

ಹರ್ಷವರ್ಧನ ಶ್ರಿಂಗ್ಲಾ ಅಮೆರಿಕಕ್ಕೆ ಭಾರತದ ನೂತನ ರಾಯಭಾರಿ

Update: 2018-12-20 22:41 IST

ಹೊಸದಿಲ್ಲಿ, ಡಿ. 20: ಅನುಭವಿ ಮುತ್ಸದ್ದಿ ಹರ್ಷವರ್ಧನ ಶ್ರಿಂಗ್ಲಾ ಅವರನ್ನು ಅಮೆರಿಕಕ್ಕಿರುವ ಭಾರತದ ರಾಯಭಾರಿಯನ್ನಾಗಿ ಗುರುವಾರ ನೇಮಕ ಮಾಡಲಾಗಿದೆ. ಭಾರತೀಯ ವಿದೇಶಿ ಸೇವೆಯ 1984ನೇ ಬ್ಯಾಚ್‌ನ ಅಧಿಕಾರಿಯಾಗಿರುವ ಶ್ರಿಂಗ್ಲಾ ನವತೇಜ್ ಸಿಂಗ್ ಅವರ ಉತ್ತರಾಧಿಕಾರಿಯಾಗಲಿದ್ದಾರೆ. ಅವರು ಶೀಘ್ರದಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ನೀಡಿದ ಹೇಳಿಕೆಯಲ್ಲಿ ತಿಳಿಸಿದೆ. ಪ್ರಸ್ತುತ ಶ್ರಿಂಗ್ಲಾ ಅವರು ಬಾಂಗ್ಲಾದೇಶಕ್ಕಿರುವ ಭಾರತದ ಹೈಕಮಿಷನರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News