×
Ad

ರುಹಿ ರಾಜುಗೆ ಬೆಳ್ಳಿ

Update: 2018-12-20 23:36 IST

ಹೈದರಾಬಾದ್, ಡಿ.20: ಭಾರತ ಮೂಲದ ಅಮೆರಿಕ ಪ್ರಜೆ ರುಹಿ ರಾಜು ಬಾಂಗ್ಲಾದೇಶ ಅಂತರ್‌ರಾಷ್ಟ್ರೀಯ ಜೂನಿಯರ್ ಬ್ಯಾಡ್ಮಿಂಟನ್ ಟೂರ್ನಿಯ ಅಂಡರ್-15 ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.

ಟೂರ್ನಿಯ ಅಗ್ರ ಶ್ರೇಯಾಂಕಿತೆಯಾಗಿದ್ದ ರುಹಿ, ಎರಡನೇ ಶ್ರೇಯಾಂಕದ ತ್ರೀಸಾ ಜೋಲಿ ಅವರ ಎದುರು ಫೈನಲ್ ನಲ್ಲಿ 15-21, 11-21 ಗೇಮ್‌ಗಳ ಅಂತರದಲ್ಲಿ ಸೋಲು ಅನುಭವಿಸಿದರು.

15 ವರ್ಷದ ರುಹಿ, ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶದ ನಂ.1 ಆಟಗಾರ್ತಿ ರಹೀಮಾ ಅವರನ್ನು 21-17, 21-17 ಗೇಮ್‌ಗಳ ಅಂತರದಿಂದ ಹಾಗೂ ಕ್ವಾರ್ಟರ್‌ಫೈನಲ್‌ನಲ್ಲಿ ಬಾಂಗ್ಲಾದ ರಾಸ್ಮಾ ಅಖ್ತರ್ ಅವರನ್ನು 21-11, 21-12 ಗೇಮ್‌ಗಳ ಅಂತರದಿಂದ ಮಣಿಸಿದ್ದರು.

ರುಹಿ ಬಿಡಬ್ಲುಎಫ್ ಜೂನಿಯರ್ ರ್ಯಾಂಕಿಂಗ್‌ನಲ್ಲಿ ತೀವ್ರಗತಿಯಲ್ಲಿ ಏರಿಕೆ ಕಂಡಿದ್ದರು. ಈ ವರ್ಷದ ಸೆಪ್ಟಂಬರ್‌ನಲ್ಲಿ ಅವರು 26ನೇ ಸ್ಥಾನದಲ್ಲಿದ್ದ್ದರು. ರುಹಿ ಹೈದರಾಬಾದ್‌ನ ಸುಚಿತ್ರಾ ಬ್ಯಾಡ್ಮಿಂಟನ್ ಅಕಾಡಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News