×
Ad

ಕ್ಯಾಲೆಂಡರ್ ವರ್ಷದಲ್ಲಿ 100 ವಿಕೆಟ್ ಪಡೆಯುವ ಹಾದಿಯಲ್ಲಿ ರಶೀದ್

Update: 2018-12-20 23:44 IST

ಕಾಬೂಲ್, ಡಿ.20: ಅಫ್ಘಾನಿಸ್ತಾನದ ತಾರಾ ಸ್ಪಿನ್ನರ್ ರಶೀದ್ ಖಾನ್ ವರ್ಷವೊಂದರಲ್ಲಿ 100 ಟಿ20 ವಿಕೆಟ್ ಪಡೆದ ಪ್ರಥಮ ಬೌಲರ್ ಎನಿಸಿಕೊಳ್ಳುವ ಹಾದಿಯಲ್ಲಿದ್ದಾರೆ. 2018-19ರ ಸಾಲಿನ ಬಿಗ್ ಬ್ಯಾಷ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ತಂಡ ಪರ ಆಡಿದ ರಶೀದ್ 3 ವಿಕೆಟ್ ಪಡೆದಿದ್ದರು. ಆ ಮೂಲಕ ಅವರು 2018ರ ವರ್ಷದಲ್ಲಿ ತಮ್ಮ ಒಟ್ಟು ವಿಕೆಟ್‌ಗಳ ಸಂಖ್ಯೆಯನ್ನು 92ಕ್ಕೆ ಏರಿಸಿಕೊಂಡಿದ್ದರು.

ಇದೇ ವರ್ಷದಲ್ಲಿ ಸ್ಟ್ರೈಕರ್ಸ್ ತಂಡ ಇನ್ನೂ ಮೂರು ಪಂದ್ಯ ಆಡಲಿದ್ದು, ರಶೀದ್ 100 ವಿಕೆಟ್‌ಗಳ ಮೈಲುಗಲ್ಲು ತಲುಪುವ ಹಾದಿಯಲ್ಲಿ ಸಾಗಿದ್ದಾರೆ. ಈಗಾಗಲೇ ಅವರು ವರ್ಷವೊಂದರಲ್ಲಿ ಅತಿ ಹೆಚ್ಚು ಟಿ20 ವಿಕೆಟ್ ಪಡೆದ ದಾಖಲೆಯನ್ನು ಮುರಿದಿದ್ದಾರೆ. ಈ ದಾಖಲೆ ಮೊದಲು ವಿಂಡೀಸ್ ಆಲ್‌ರೌಂಡರ್ ಡ್ವೇನ್ ಬ್ರಾವೊ ಹೆಸರಿನಲ್ಲಿತ್ತು. ಅವರು 2016ರ ಕ್ಯಾಲೆಂಡರ್ ವರ್ಷದಲ್ಲಿ ಒಟ್ಟು 87 ವಿಕೆಟ್ ಗಳಿಸಿದ್ದರು. 2017ರಲ್ಲಿ 56 ಪಂದ್ಯಗಳನ್ನು ಆಡಿದ್ದ ರಶೀದ್ 80 ವಿಕೆಟ್ ಪಡೆದು ಮೂರನೇ ಸ್ಥಾನ ಪಡೆದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News