ಪ್ರವಾಹ ಸಂತ್ರಸ್ತರಿಗೆ 1.14 ಮಿ.ಡಾಲರ್ ದೇಣಿಗೆ
Update: 2018-12-21 23:32 IST
ಮ್ಯಾಡ್ರಿಡ್, ಡಿ.21: ಸ್ಪೇನ್‌ನ ಮಲ್ಲೊರ್ಕಾ ದ್ವೀಪಪ್ರದೇಶದಲ್ಲಿ ಪ್ರವಾಹದಿಂದ ಸಂತ್ರಸ್ತರಾದವರಿಗೆ ಟೆನಿಸ್ ತಾರೆ ರಫೆಲ್ ನಡಾಲ್ 1.14 ಮಿಲಿಯನ್ ಡಾಲರ್ (7.99 ಕೋ.ರೂ.)ಧನಸಹಾಯ ಮಾಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಈ ಕುರಿತು ಗುರುವಾರ ಸ್ಪಷ್ಟಪಡಿಸಿರುವ ನಗರದ ಮೇಯರ್ ಮಟೆವ್ ಪ್ಯುಗ್ರೊಸ್, ಮಹಾನಗರ ಪಾಲಿಕೆ, ಇಲ್ಲಿನ ನಿವಾಸಿಗಳು ಹಾಗೂ ವಿಶೇಷವಾಗಿ ಪ್ರವಾಹದಿಂದ ಸಂತ್ರಸ್ತರ ಪರವಾಗಿ ನಡಾಲ್ ಅವರ ಕಾರ್ಯಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ಇಲ್ಲಿ ಪ್ರವಾಹ ಉಂಟಾದ ವೇಳೆ ಹಾಗೂ ಅದರ ನಂತರ ಅವರು ತೋರಿದ ಸಂವೇದನೆ ಮೆಚ್ಚುವಂತಹದ್ದು ಎಂದು ಹೇಳಿದ್ದಾರೆ.
ಅಕ್ಟೋಬರ್‌ನಲ್ಲಿ ಸಂಭವಿಸಿದ ಪ್ರವಾಹದಲ್ಲಿ 13 ಜನರು ಸಾವನ್ನಪ್ಪಿದ್ದರು. ದಿಢೀರ್ ಭಾರೀ ಮಳೆಯಾದ ವೇಳೆ ನಡಾಲ್ ತಮ್ಮ ಟೆನಿಸ್ ಅಕಾಡಮಿಯು ಅಲ್ಲಿ ಸಹಾಯಕ್ಕೆ ಲಭ್ಯವಿರುವಂತೆ ವ್ಯವಸ್ಥೆ ಮಾಡಿದ್ದರು.