ಅಂಗನವಾಡಿ ಸಹಾಯಕಿರ ಹುದ್ದೆಗೆ ಅರ್ಜಿ ಆಹ್ವಾನ

Update: 2018-12-22 11:19 GMT

ಮಂಗಳೂರು, ಡಿ.22: ವಿಟ್ಲ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಕೇಪು ಗ್ರಾಪಂ ವ್ಯಾಪ್ತಿಯ ಮೈರಾ ಅಂಗನವಾಡಿ ಕೇಂದ್ರ, ಕನ್ಯಾನ ಗ್ರಾಪಂ ವ್ಯಾಪ್ತಿಯ ಬಾಳೆಕೋಡಿ ಅಂಗನವಾಡಿ ಕೇಂದ್ರ, ವಿಟ್ಲ ಪಪಂ ವ್ಯಾಪ್ತಿಯ ಅನಿಲಕಟ್ಟೆ ಮತ್ತು ಅಲಂಗಾರು ಪಾದೆ ಅಂಗನವಾಡಿ ಕೇಂದ್ರ (ಎಲ್ಲವೂ ಸಾಮಾನ್ಯ)ಕ್ಕೆ ಸಹಾಯಕಿಯರ ಗೌರವ ಸೇವೆಯ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ (www.anganwadirecruit.kar.nic.in) ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

2019ರ ಜನವರಿ 15 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನೆ ವಿಟ್ಲ, ರಿಹಾ ಪ್ಲಾನೆಟ್, ಚಂದ್ರನಾಥ ಬಸದಿ ಎದುರು, ಪುತ್ತೂರು ರಸ್ತೆ, ವಿಟ್ಲ ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News