ಇಂಡೋನೇಷ್ಯಾದಲ್ಲಿ ಸುನಾಮಿ: 43ಕ್ಕೂ ಹೆಚ್ಚು ಮಂದಿ ಜಲಸಮಾಧಿ

Update: 2018-12-23 03:37 GMT

ಜಕಾರ್ತ, ಡಿ. 23: ಇಂಡೋನೇಷ್ಯಾದಲ್ಲಿ ಸಂಭವಿಸಿದ ಭೀಕರ ಸುನಾಮಿಯಿಂದ ಕನಿಷ್ಠ 43 ಮಂದಿ ಮೃತಪಟ್ಟಿದ್ದು, 600ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

"ಸುಂದಾ ಸ್ಟ್ರೈಟ್‌ನಲ್ಲಿ 40 ಮಂದಿ ಬಲಿಯಾಗಿದ್ದು, 584 ಮಂದಿ ಗಾಯಗೊಂಡಿದ್ದಾರೆ. ಇಬ್ಬರು ನಾಪತ್ತೆಯಾಗಿದ್ದಾರೆ" ಎಂದು ರಾಷ್ಟ್ರೀಯ ವಿಕೋಪ ಏಜೆನ್ಸಿ ವಕ್ತಾರ ಸುತೊಪೊ ಪುರ್ವೊ ನುಗ್ರೊಹೊ ಹೇಳಿಕೆ ನೀಡಿದ್ದು, ಪಕ್ಕದ ಸೆರಾಂಗ್‌ನಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅಲೆಯ ಅಬ್ಬರಕ್ಕೆ ನೂರಾರು ಕಟ್ಟಡಗಳು ಧ್ವಂಸವಾಗಿದ್ದು, ದಕ್ಷಿಣ ಸುಮಾತ್ರದಲ್ಲಿ ಮತ್ತು ಜಾವಾದ ಪಶ್ಚಿಮ ತುದಿಯಲ್ಲಿ ಯಾವ ಮುನ್ಸೂಚನೆಯೂ ಇಲ್ಲದೇ ಶನಿವಾರ ರಾತ್ರಿ 9.30ರ ವೇಳೆಗೆ (ಸ್ಥಳೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 2.30ಕ್ಕೆ) ಈ ದೈತ್ಯ ತೆರೆಗಳು ಅಪ್ಪಳಿಸಿವೆ ಎಂದು ಹೇಳಿದ್ದಾರೆ.

ಈ ದೈತ್ಯ ತೆರೆಗಳು ಹುಟ್ಟಿಕೊಳ್ಳಲು ಹೊಸ ಚಂದ್ರ ಹಾಗೂ ನೀರಿನ ಅಡಿಯಲ್ಲಿ ಸಂಭವಿಸಿದ ಭೂಕುಸಿತ ಕಾರಣವಾಗಿದೆ. ಪರಿಣಾಮವಾಗಿ ಅನಾಕ್ ಕ್ರಕೋಟಾ ಚಿಮ್ಮಿದ್ದು ಜಾವಾ ಮತ್ತು ಸುಮಾತ್ರಾ ನಡುವೆ ಸುಂದಾ ಸ್ಟ್ರೈಟ್ ಎಂಬ ಪುಟ್ಟ ದ್ವೀಪ ಸೃಷ್ಟಿಸಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

ಈ ಎಲ್ಲ ಕಾರಣಗಳು ಸುನಾಮಿ ಅಲೆಗಳು ಅಪ್ಪಳಿಸುವಂತೆ ಮಾಡಿವೆ. ಆದರೆ ಇದು ಹೇಗೆ ಸಂಭವಿಸಿದೆ ಎಂದು ದೃಢಪಡಿಸುವ ನಿಟ್ಟಿನಲ್ಲಿ ಭೌಗೋಳಿಕ ಸಂಸ್ಥೆ ಅಧ್ಯಯನ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News