ಇಂಡೋನೇಷ್ಯಾ ಸುನಾಮಿ: ಸಂಗೀತ ಕಾರ್ಯಕ್ರಮದ ಮೇಲೆ ಅಪ್ಪಳಿಸಿದ ಅಲೆಗಳು

Update: 2018-12-23 11:06 GMT

ಕಾರಿಟಾ, ಡಿ.23: ಗಾಯನ ಕಾರ್ಯಕ್ರಮವೊಂದರ ಮೇಲೆ ಸುನಾಮಿ ಅಲೆ ಅಪ್ಪಳಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಂಡೋನೇಶ್ಯಾದ ತಾಂಜುಂಗ್ ಲೇಸುಂಗ್ ಬೀಚ್ ರೆಸಾರ್ಟ್ ನಲ್ಲಿ ಘಟನೆ ನಡೆದಿದೆ.

ಕಾರ್ಯಕ್ರಮ ಹಮ್ಮಿಕೊಂಡಿದ್ದ ‘ಸೆವೆಂಟೀನ್’ ಬ್ಯಾಂಡ್ ನ ರೀಫಿಯಾನ್ ಫಜರ್ಸಾ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದರಲ್ಲಿ ತಂಡದ ರೋಡ್ ಮ್ಯಾನೇಜರ್ ಹಾಗು ಮತ್ತೊಬ್ಬರು ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ.

ಜಾವಾದ ಪಶ್ಚಿಮ ಭಾಗದ ತಾಂಜುಂಗ್ ಲೇಸುಂಗ್ ಬೀಚ್ ರೆಸಾರ್ಟ್ ನಲ್ಲಿ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಸಮುದ್ರದ ಅಲೆಗಳು ಅಪ್ಪಳಿಸಿತ್ತು. ಈ ಭಯಾನಕ ಘಟನೆಯ ವಿಡಿಯೋ ಈ ಕೆಳಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News