ಕಟ್ಟಡ ಕುಸಿದು 3 ಸಾವು, 8 ಮಂದಿಗೆ ಗಾಯ

Update: 2018-12-23 14:25 GMT

ಮುಂಬೈ, ಡಿ. 23: ಮುಂಬೈ ಗೋರೆಗಾಂವ್‌ನ ಅಝಾದ್ ಮೈದಾನದ ಸಮೀಪ ರವಿವಾರ ನಿರ್ಮಾಣ ಹಂತದಲ್ಲಿರುವ ಕಟ್ಟಡ ಕುಸಿದು ಕನಿಷ್ಠ ಮೂವರು ಮೃತಪಟ್ಟಿದ್ದಾರೆ ಹಾಗೂ ಇತರ 8 ಮಂದಿ ಗಾಯಗೊಂಡಿದ್ದಾರೆ.

ಮೋತಿಲಾಲ್ ನಗರದ ಮ್ಹಾಡಾ ಚಾವ್ಲಾದಲ್ಲಿರುವ ಮೂರು ಮಹಡಿಯ ನಿರ್ಮಾಣ ಹಂತದಲ್ಲಿರುವ ಕಟ್ಟಡ ಕುಸಿಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾಹಿತಿ ತಿಳಿದ ಕೂಡಲೇ ಅಗ್ನಿ ಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿದರು.

ಮೂರು ಅಗ್ನಿಶಾಮಕ ದಳದ ವಾಹನ ಹಾಗೂ ಆ್ಯಂಬುಲೆನ್ಸ್ ಅನ್ನು ಘಟನಾ ಸ್ಥಳದಲ್ಲಿ ನಿಯೋಜಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ 9 ಮಂದಿಯನ್ನು ರಕ್ಷಿಸಿ ಗೋರೆಗಾವ್ ಸಿದ್ಧಾರ್ಥ ಆಸ್ಪತ್ರೆಗೆ ಕೊಂಡೊಯ್ಯ ಲಾಯಿತು. ಇವರಲ್ಲಿ ಗಂಭೀರ ಗಾಯಗೊಂಡ ಶ್ರವಣ್ ಕುಮಾರ್ (27), ಸುಭಾಶ್ ಚೌಹಾಣ್ (38) ಹಾಗೂ ಅಪರಿಚಿತ ವ್ಯಕ್ತಿಯೋರ್ವ ಮೃತಪಟ್ಟಿದ್ದಾರೆ. ಗಾಯ ಗೊಂಡ ಮಂಗಲ್ ಬನ್ಸಾ (35), ಮುನ್ನಾ ಶೇಕ್ (30) ಹಾಗೂ ಶೇಖರ್ (35) ಅವರನ್ನು ದಾಖಲಿಸಲಾಗಿದೆ. ಉಳಿದವರಿಗೆ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News