ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಭಾರತದಿಂದ ಕಲಿಯಿರಿ: ಪಾಕ್ ಪ್ರಧಾನಿಗೆ ಒವೈಸಿ ತಿರುಗೇಟು

Update: 2018-12-23 16:31 GMT

ಹೊಸದಿಲ್ಲಿ, ಡಿ.23: ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳಬೇಕು ಎನ್ನುವುದನ್ನು ಪಾಕಿಸ್ತಾನ ಕಲಿಸುತ್ತದೆ ಎನ್ನುವ ಹೇಳಿಕೆ ನೀಡಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ರಿಗೆ ಎಐಎಂಐಎಂ ನಾಯಕ ಅಸಾದುದ್ದೀನ್ ಒವೈಸಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಪಾಕಿಸ್ತಾನದ ಸಂವಿಧಾನದ ಪ್ರಕಾರ ಮುಸ್ಲಿಮ್ ವ್ಯಕ್ತಿ ಮಾತ್ರ ಅಧ್ಯಕ್ಷನಾಗಬಹುದು. ಭಾರತವು ತುಳಿತಕ್ಕೊಳಗಾದ ಸಮುದಾಯಗಳ ರಾಷ್ಟ್ರಪತಿಗಳನ್ನು ಕಂಡಿದೆ. ಭಾರತದ ಆಂತರಿಕ ರಾಜಕೀಯ ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಖಾನ್ ಸಾಹಬ್ ನಮ್ಮಿಂದ ಕಲಿಯಲು ಇದು ಸರಿಯಾದ ಸಮಯ” ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News