ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಭೇಟಿಯಾದ ಸಿಂಧು

Update: 2018-12-24 09:05 GMT

 ಹೈದರಾಬಾದ್, ಡಿ.24: ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಸೋಮವಾರ ತೆಲಂಗಾಣದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಭೇಟಿಯಾದರು. ಇತ್ತೀಚೆಗೆ ಬಿಡಬ್ಲುಎಫ್ ವರ್ಲ್ಡ್ ಟೂರ್ ಫೈನಲ್ಸ್ ಪ್ರಶಸ್ತಿಯನ್ನು ಜಯಿಸಿ ದೇಶಕ್ಕೆ ಹೆಸರು ಹಾಗೂ ಪ್ರಸಿದ್ಧಿಯನ್ನು ತಂದುಕೊಟ್ಟಿರುವ ಸಿಂಧುಗೆ ಉಪರಾಷ್ಟ್ರಪತಿ ಅಭಿನಂದಿಸಿದರು.

ಇತ್ತೀಚೆಗೆ ಚೀನಾದಲ್ಲಿ ಪ್ರಶಸ್ತಿ ಜಯಿಸಿರುವ ಸಿಂಧು ಇತಿಹಾಸ ನಿರ್ಮಿಸಿದ್ದರು. ಅವರಿಗೆ ಅಭಿನಂದನೆಗಳು ಎಂದು ನಾಯ್ಡು ಟ್ವೀಟ್ ಮಾಡಿದ್ದಾರೆ. ಸಿಂಧು ತನ್ನ ತಂದೆಯ ಜೊತೆ ನಾಯ್ಡು ಅವರನ್ನು ಭೇಟಿಯಾಗಿ ತಾನು ಗೆದ್ದ ಪದಕವನ್ನು ತೋರಿಸಿದರು.

ಚೀನಾದಲ್ಲಿ ನಡೆದ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಜಪಾನ್‌ನ ನೊರೊಮಿ ಒಕುಹರಾರನ್ನು 21-19, 21-17 ಗೇಮ್‌ಗಳಿಂದ ಮಣಿಸಿದ್ದ ಸಿಂಧು ಚೊಚ್ಚಲ ಬಿಡಬ್ಲು ಎಫ್ ವರ್ಲ್ಡ್ ಟೂರ್ ಪ್ರಶಸ್ತಿ ಜಯಿಸಿದ್ದರು. ಈ ವರ್ಷ ಐದು ಪ್ರಮುಖ ಟೂರ್ನಿಗಳಲ್ಲಿ ಫೈನಲ್‌ಗೆ ತಲುಪಿದ್ದ ಸಿಂಧು ಪ್ರಶಸ್ತಿ ಜಯಿಸಲು ವಿಫಲರಾಗಿದ್ದರು.

‘‘ಈ ವರ್ಷ ಮೊದಲ ಪ್ರಶಸ್ತಿ ಜಯಿಸಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ. ಪ್ರತಿ ಬಾರಿ ಫೈನಲ್‌ಗೆ ತಲುಪಿದ್ದರೂ ಸೋಲುತ್ತಿದ್ದೆ. ಈ ವರ್ಷ ನನಗೆ ಸ್ಮರಣೀಯವಾಗಿದೆ. ಪ್ರಶಸ್ತಿಯೊಂದಿಗೆ ವರ್ಷವನ್ನು ಕೊನೆಗೊಳಿಸಿದ್ದಕ್ಕೆ ಸಂತೋಷವಾಗುತ್ತಿದೆ’’ ಎಂದು ಸಿಂಧು ಪಂದ್ಯದ ಬಳಿಕ ಪ್ರತಿಕ್ರಿಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News