×
Ad

ಬಾಕ್ಸಿಂಗ್ ಡೇ ಟೆಸ್ಟ್‌ಗೆ ಗುಣಮಟ್ಟದ ಪಿಚ್: ಭರವಸೆ

Update: 2018-12-24 23:46 IST

ಮೆಲ್ಬೋರ್ನ್, ಡಿ.24: ಭಾರತ ಮತ್ತು ಆಸ್ಟ್ರೇಲಿಯ ಮಧ್ಯೆ ನಡೆಯಲಿರುವ ಬಾಕ್ಸಿಂಗ್ ಡೇ(ಡಿ.26)ಟೆಸ್ಟ್‌ಗೆ ಉತ್ತಮ ಗುಣಮಟ್ಟದ ಪಿಚ್ ರೂಪಿಸಲಾಗುವುದು ಎಂದು ಎಮ್‌ಸಿಜಿ ಪಿಚ್‌ನ ಕ್ಯುರೇಟರ್ ಮ್ಯಾಥ್ಯು ಪೇಜ್ ಭರವಸೆ ನೀಡಿದ್ದಾರೆ.

ಕಳೆದ ವರ್ಷದ ಆ್ಯಶಸ್ ಸರಣಿಯ ನಾಲ್ಕನೇ ಟೆಸ್ಟ್ ಜೀವರಹಿತ ಪಿಚ್‌ನಲ್ಲಿ ಅತ್ಯಂತ ನೀರಸ ಡ್ರಾ ಕಂಡ ನಂತರ ಪಿಚ್‌ನ ಕುರಿತು ಹೆಚ್ಚಿನ ಗಮನ ನೀಡಲಾಗಿದೆ.ಈ ಪಂದ್ಯದ ಬಳಿಕ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಸಮಿತಿ ಪಿಚ್‌ಗೆ ‘ಕಳಪೆ’ ರೇಟಿಂಗ್ ನೀಡಿತ್ತು. ಅಲ್ಲದೆ ಪಿಚ್ ಬಗ್ಗೆ ಎಲ್ಲ ಕಡೆಯಿಂದ ಟೀಕೆಗಳು ಕೇಳಿಬಂದಿದ್ದವು.

ಭಾರತ ಮತ್ತು ಆಸ್ಟ್ರೇಲಿಯ ತಂಡಗಳ ಮಧ್ಯೆ ನಡೆಯುವ ಮೂರನೇ ಟೆಸ್ಟ್‌ಗೆ ಪಿಚ್‌ನ್ನು, ಕಳೆದ ತಿಂಗಳು ವಿಕ್ಟೋರಿಯ ಹಾಗೂ ದಕ್ಷಿಣ ಆಸ್ಟ್ರೇಲಿಯ ತಂಡಗಳ ಮಧ್ಯೆ ನಡೆದ ಪಂದ್ಯದಲ್ಲಿ ರೂಪಿಸಿದಂತೆ ರೂಪಿಸಲಾಗುವುದು. ಪಿಚ್ ಮೇಲೆ ಸ್ವಲ್ಪ ಹಸಿರು ಹುಲ್ಲು ಇದ್ದು ಪಂದ್ಯದ ಆರಂಭದಲ್ಲಿ ವೇಗಿಗಳಿಗೆ ಸಹಕರಿಸಿದರೆ ನಂತರ ವೇಗಿಗಳಿಗೆ ಅನುಕೂಲವಾಗಲಿದೆ ಎಂದು ಪೇಜ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News