ಬಜ್ಪೆ: ಕೊಂಚಾರ್ ಯೂತ್ ಕೌನ್ಸಿಲ್ ಅಸೋಸಿಯೇಶನ್ ನಿಂದ ರಕ್ತದಾನ ಶಿಬಿರ

Update: 2018-12-25 05:16 GMT

ಬಜ್ಪೆ, ಡಿ.25: ಕೊಂಚಾರ್ ಯೂತ್ ಕೌನ್ಸಿಲ್ ಅಸೋಸಿಯೇಶನ್ ಪ್ರಾಯೋಜಕತ್ವದಲ್ಲಿ ಮಂಗಳೂರಿನ ಎ.ಜೆ. ಆಸ್ಪತ್ರೆಯ ಸಹಯೋಗದಲ್ಲಿ ರಕ್ತದಾನ ಶಿಬಿರವು ಬಜ್ಪೆ ಪಂಚಾಯತ್ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.

ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಸಮಿತಿಯ ಸದಸ್ಯ ಎ.ಕೆ ಅಶ್ರಫ್ ಜೋಕಟ್ಟೆ ಮಾತನಾಡಿ, ರಕ್ತದಾನದ ಮಹತ್ವವನ್ನು ವಿವರಿಸಿದರು.

ಮುಖ್ಯ ಅತಿಥಿಗಳಾಗಿ ಬಜ್ಪೆ ಗ್ರಾಪಂ ಸದಸ್ಯ ಸುರೇಂದ್ರ, ನಝೀರ್, ಆಯಿಶ, ಆಲ್ ಕಾಲೇಜು ಸ್ಟೂಡೆಂಟ್ಸ್ ಯೂನಿಯನ್ ದ.ಕ. ಇದರ ಉಪಾಧ್ಯಕ್ಷ ತಾಜುದ್ದೀನ್, ಕೊಂಚಾರ್ ಯೂತ್ ಕೌನ್ಸಿಲ್ ಅಸೋಸಿಯೇಶನ್ ನಿರ್ವಾಹಕರಾದ ರಫೀಕ್, ರಿಝ್ವಾನ್, ಶಾಫಿ, ರಾಹಿಲ್ ಸಲ್ಮಾನ್ ಕಲಂದರ್  ಮತ್ತಿತರರು ಉಪಸ್ಥಿತರಿದ್ದರು.

ಅಸೋಸಿಯೇಶನ್ ನಿರ್ವಾಹಕ ಝಹಿಮ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಬೆಳಗ್ಗೆ 9:30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆದ ಶಿಬಿರದಲ್ಲಿ ಸುಮಾರು 86 ರಕ್ತದಾನಿಗಳು ರಕ್ತದಾನ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News