ಹೊಸ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರು ಸಮಾನ ನಾಗರಿಕರು: ಇಮ್ರಾನ್ ಖಾನ್

Update: 2018-12-26 16:05 GMT

ಇಸ್ಲಾಮಾಬಾದ್, ಡಿ. 26: ಭಾರತ ಮತ್ತು ಪಾಕಿಸ್ತಾನಗಳು ತಮ್ಮ ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳುತ್ತಿವೆ ಎನ್ನುವ ಚರ್ಚೆಯನ್ನು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮಂಗಳವಾರ ಮತ್ತೊಮ್ಮೆ ಕೈಗೆತ್ತಿಕೊಂಡಿದ್ದಾರೆ.

‘‘ನಯಾ (ಹೊಸ) ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯಗಳನ್ನು ಸಮಾನ ನಾಗರಿಕರಾಗಿ ಪರಿಗಣಿಸಲಾಗುವುದು; ಈಗ ಭಾರತದಲ್ಲಿ ನಡೆಯುತ್ತಿರುವಂತೆ ಪಾಕಿಸ್ತಾನದಲ್ಲಿ ನಡೆಯುವುದಿಲ್ಲ’’ ಎಂದು ಅವರು ಹೇಳಿದ್ದಾರೆ.

‘‘ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳಬೇಕು ಎನ್ನುವುದನ್ನು ನಾನು ನರೇಂದ್ರ ಮೋದಿ ಸರಕಾರಕ್ಕೆ ತೋರಿಸಿಕೊಡುತ್ತೇನೆ’’ ಎಂಬ ಹೇಳಿಕೆ ನೀಡಿದ ದಿನಗಳ ಬಳಿಕ ಇಮ್ರಾನ್ ಖಾನ್ ಮತ್ತೊಮ್ಮೆ ಈ ವಿಷಯ ಪ್ರಸ್ತಾಪಿಸಿದ್ದಾರೆ.

ಪಾಕಿಸ್ತಾನದ ಸಂಸ್ಥಾಪಕ ಮುಹಮ್ಮದ್ ಅಲಿ ಜಿನ್ನಾರ ಹುಟ್ಟುಹಬ್ಬ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

‘‘ಹೊಸ ಪಾಕಿಸ್ತಾನವು ಮುಹಮ್ಮದ್ ಅಲಿ ಜಿನ್ನಾರ ಪಾಕಿಸ್ತಾನವಾಗಿದೆ. ಭಾರತದಲ್ಲಿ ಏನು ನಡೆಯುತ್ತಿದೆಯೋ ಅದಕ್ಕೆ ವ್ಯತಿರಿಕ್ತವಾಗಿ, ನಮ್ಮ ಅಲ್ಪಸಂಖ್ಯಾತರನ್ನು ಸಮಾನ ನಾಗರಿಕರಾಗಿ ನಾವು ನೋಡಿಕೊಳ್ಳುತ್ತೇವೆ’’ ಎಂದು ಪಾಕಿಸ್ತಾನದ ಪ್ರಧಾನಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News