×
Ad

ಬಾಹ್ಯಾಕಾಶದಲ್ಲಿದ್ದ ಗಗನಯಾತ್ರಿಗಳು ಭೂಮಿಗೆ ಬಂದ ಮೇಲೆ ಹೇಗೆ ನಡೆಯುತ್ತಾರೆ ಗೊತ್ತಾ?: ಈ ವಿಡಿಯೋ ನೋಡಿ

Update: 2018-12-26 22:03 IST

ಹೊಸದಿಲ್ಲಿ, ಡಿ.26: ಬಾಹ್ಯಾಕಾಶದಲ್ಲಿ 197 ದಿನಗಳನ್ನು ಕಳೆದು ಭೂಮಿಗೆ ಮರಳಿದ ಗಗನಯಾತ್ರಿಯೊಬ್ಬರು ನಡೆದಾಡಲು ಕಷ್ಟಪಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗಗನಯಾತ್ರಿ ಎಜೆ ಫ್ಯೂಸ್ಟೆಲ್ 197 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದು ಕೊನೆಗೂ ಮರಳಿದ್ದಾರೆ. ಗುರುತ್ವಾಕರ್ಷಣೆಯಿಲ್ಲದ ಬಾಹ್ಯಾಕಾಶದಲ್ಲಿ ಬದುಕುವುದು ಹೇಗೆ ಎಂಬುದಕ್ಕಾಗಿ ಗಗನಯಾತ್ರಿಗಳಿಗೆ ತರಬೇತಿ ನೀಡಲಾಗುತ್ತದೆ. ಹಲವು ದಿನಗಳನ್ನು ಅಲ್ಲಿ ಕಳೆದ ನಂತರ ಬಾಹ್ಯಾಕಾಶದ ವಾತಾವರಣಕ್ಕೆ ಹೊಂದಿಕೊಂಡ ಗಗನಯಾತ್ರಿಗಳು ಭೂಮಿಗೆ ಆಗಮಿಸಿದ ಆರಂಭದಲ್ಲಿ ಇಲ್ಲಿನ ವಾತಾವರಣಕ್ಕೆ ಹಾಗು ಗುರುತ್ವಾಕರ್ಷಣೆಗೆ ಹೊಂದಿಕೊಳ್ಳಲು ಸಾಧ್ಯವಾಗುವುದಿಲ್ಲ.

ಗಗನಯಾತ್ರಿ ಫ್ಯೂಸ್ಟೆಲ್ ನಡೆಯಲು ಕಷ್ಟಪಡುತ್ತಿದ್ದರೆ, ಅವರ ಸಮೀಪದಲ್ಲಿದ್ದ ಇಬ್ಬರು ಅವರು ಬೀಳುವುದನ್ನು ತಡೆಯುತ್ತಿರುವುದು ವಿಡಿಯೋದಲ್ಲಿದೆ. ಸ್ವತಃ ಫ್ಯೂಸ್ಟೆಲ್ ಪೋಸ್ಟ್ ಮಾಡಿರುವ ವಿಡಿಯೋ ಈ ಕೆಳಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News