ನಮಾಝ್ ವಿವಾದ ಹಿನ್ನೆಲೆ: ‘ಕಥಾ’ ಕಾರ್ಯಕ್ರಮದ ಪೆಂಡಾಲ್ ತೆರವುಗೊಳಿಸಿದ ಪೊಲೀಸರು

Update: 2018-12-27 15:49 GMT
ಸಾಂದರ್ಭಿಕ ಚಿತ್ರ

ನೊಯ್ಡ, ಡಿ.27: ಉತ್ತರ ಪ್ರದೇಶದ ಗ್ರೇಟರ್ ನೊಯ್ಡಾದಲ್ಲಿ ಅನುಮತಿಯನ್ನು ಪಡೆಯದೆ ಸಾರ್ವಜನಿಕ ಸ್ಥಳದಲ್ಲಿ ಆಯೋಜಿಸಲು ಉದ್ದೇಶಿಸಲಾಗಿದ್ದ ಕಥಾ ಕಾರ್ಯಕ್ರಮದ ಪೆಂಡಾಲನ್ನು ಪೊಲೀಸರು ತೆರವುಗೊಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಉದ್ಯೋಗಿಗಳು ಸೆಕ್ಟರ್-58ರಲ್ಲಿರುವ ಸಾರ್ವಜನಿಕ ಉದ್ಯಾನವನದಲ್ಲಿ ನಮಾಝ್ ಮಾಡಿದರೆ ಅಂಥ ಉದ್ಯೋಗಿಗಳ ಕಂಪೆನಿಯನ್ನೇ ಜವಾಬ್ದಾರಿ ಮಾಡಲಾಗುವುದು ಎಂದು ನೋಯ್ಡಾ ಪೊಲೀಸರು ಕಂಪೆನಿಗಳಿಗೆ ನೋಟಿಸ್ ಜಾರಿ ಮಾಡಿದ ಮರುದಿನವೇ ಈ ಘಟನೆ ನಡೆದಿದೆ. ನೋಯ್ಡಾದ ಕಸ್ನಾ ಪ್ರದೇಶದಲ್ಲಿ ಅನುಮತಿ ಪಡೆಯದೆ ಕಥಾ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಸೆಕ್ಟರ್-37ರ ನಿವಾಸಿಗಳು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಕಾರ್ಯಕ್ರಮ ನಡೆಯುತ್ತಿದ್ದಂತೆಯೇ ಪೆಂಡಾಲನ್ನು ತೆರವುಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಥಾ ಕಾರ್ಯಕ್ರಮದ ಆಯೋಜಕರು ಪೊಲೀಸರಿಂದ ಅನುಮತಿಯನ್ನು ಪಡೆದಿರಲಿಲ್ಲ. ಆದರೆ ಪೆಂಡಾಲನ್ನು ತೆರವುಗೊಳಿಸಿರುವುದು ಗ್ರೇಟರ್ ನೊಯ್ಡ ಪ್ರಾಧಿಕಾರವೇ ಹೊರತು ಪೊಲೀಸರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ಪ್ರಾಧಿಕಾರದ ಅಧಿಕಾರಿಗಳು ಅನುಮತಿಯಿಲ್ಲದೆ ಹಾಕಲಾಗಿದ್ದ ಪೆಂಡಾಲನ್ನು ತೆರವುಗೊಳಿಸಿದ್ದಾರೆ. ಕಾನೂನು ಪ್ರಕಾರ ನಾವು ಕ್ರಮ ಕೈಗೊಂಡಿದ್ದೇವೆ. ಆಯೋಜಕರು ಅನುಮತಿ ಪಡೆದರೆ ತಮ್ಮ ಕಾರ್ಯಕ್ರಮವನ್ನು ಮುಂದುವರಿಸಬಹುದು ಎಂದು ಗ್ರೇಟರ್ ನೊಯ್ಡ ಪ್ರಾಧಿಕಾರದ ಹೆಚ್ಚುವರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಕುಮಾರ್ ಗುಪ್ತಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News