ಯುಎಇ ರಾಜಕುಮಾರಿ ‘ಕ್ಷೋಭೆಗೊಳಗಾದ ಯುವತಿ’: ವಿಶ್ವಸಂಸ್ಥೆಯ ಮಾಜಿ ಮಾನವಹಕ್ಕು ಮುಖ್ಯಸ್ಥೆ

Update: 2018-12-27 17:40 GMT

ಲಂಡನ್, ಡಿ. 27: ಹಲವು ತಿಂಗಳುಗಳ ಹಿಂದೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ರಾಜಕುಮಾರಿಯೊಬ್ಬರು ‘ಕ್ಷೋಭೆಗೊಳಗಾದ ಯುವತಿ’ ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಘಟಕದ ಮಾಜಿ ಮುಖ್ಯಸ್ಥೆ ಮೇರಿ ರಾಬಿನ್ಸನ್ ಗುರುವಾರ ಹೇಳಿದ್ದಾರೆ.

ರಾಜಕುಮಾರಿ ಶೇಖಾ ಲತೀಫಾರನ್ನು ಈ ತಿಂಗಳು ನಾನು ಭೇಟಿಯಾಗಿದ್ದೇನೆ ಎಂದು ಅವರು ‘ಬಿಬಿಸಿ ರೇಡಿಯೊ 4’ರ ‘ಟುಡೇ’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ತಮ್ಮ ಮಗಳ ವಿಷಯದಲ್ಲಿ ಸಹಾಯ ಮಾಡುವಂತೆ ದುಬೈ ಆಡಳಿತಗಾರ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್-ಮಖ್ತೂಮ್‌ರ ಪತ್ನಿ ರಾಜಕುಮಾರಿ ಹಯಾ ನನ್ನನ್ನು ಆಹ್ವಾನಿಸಿದ್ದರು ಎಂದು ಮೇರಿ ತಿಳಿಸಿದರು.

ಲತೀಫಾ ಮಾರ್ಚ್‌ನಲ್ಲಿ ಯುಎಇಯಿಂದ ತಪ್ಪಿಸಿಕೊಂಡು ಬಂದಿದ್ದರು. ಆದರೆ, ಅವರನ್ನು ಭಾರತೀಯ ಕರಾವಳಿಯಲ್ಲಿ ಸೆರೆಹಿಡಿಯಲಾಗಿತ್ತು. ಅಂದಿನಿಂದ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.

ನನ್ನ ಮೇಲೆ ನನ್ನ ಕುಟುಂಬ ವಿಧಿಸಿರುವ ನಿರ್ಬಂಧಗಳಿಂದಾಗಿ ನಾನು ಯುಎಇ ತೊರೆಯುತ್ತಿದ್ದೇನೆ ಎಂದು ಅಂದು ಲತೀಫಾ ‘ಯೂಟ್ಯೂಬ್’ ವೀಡಿಯೊವೊಂದರಲ್ಲಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News