ಶ್ರೀರಾಮನಿಗೆ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿ ಮನೆ ನಿರ್ಮಿಸಿ : ಬಿಜೆಪಿ ಸಂಸದ

Update: 2018-12-28 09:36 GMT

ಹೊಸದಿಲ್ಲಿ,ಡಿ.2: ಉತ್ತರ ಪ್ರದೇಶದ ಘೋಸಿ ಕ್ಷೇತ್ರದ ಬಿಜೆಪಿ ಸಂಸದ ವಿಚಿತ್ರ ಬೇಡಿಕೆಯೊಂದನ್ನು ಸರಕಾರದ ಮುಂದಿಟ್ಟಿದ್ದಾರೆ. ಅಯೋಧ್ಯೆಯಲ್ಲಿ 'ರಾಮ ಲಲ್ಲಾ'ನಿಗೆ  ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಮನೆಯೊಂದನ್ನು ನಿರ್ಮಿಸಿಕೊಡಬೇಕೆಂಬುದೇ ಅವರ ಆಗ್ರಹವಾಗಿದೆ. ಸದ್ಯ ರಾಮ ಲಲ್ಲಾ 'ಟೆಂಟಿ'ನಲ್ಲಿ ವಾಸಿಸುತ್ತಿರುವುದರಿಂದ ಇಂತಹ ಕ್ರಮ ಕೈಗೊಳ್ಳಬೇಕೆಂದು ಶಾಸಕ ಹರಿ ನಾರಾಯನ್ ರಾಜಭರ್ ಆಗ್ರಹಿಸಿದ್ದಾರೆ.

1992ರಲ್ಲಿ ವಿವಾದಿತ ಸ್ಥಳದಲ್ಲಿನ ತಾತ್ಕಾಲಿಕ ಗರ್ಭಗುಡಿಯಲ್ಲಿ ರಾಮನ ಮೂರ್ತಿ ಸ್ಥಾಪನೆಯಾದಂದಿನಿಂದ ಅದು ಅಲ್ಲೇ ಇದೆ. ತನ್ನ ತಲೆಯ ಮೇಲೊಂದು ಸೂರಿಲ್ಲದೆ ಶ್ರೀ ರಾಮನು ಚಳಿ, ಬಿಸಿಲು, ಮಳೆಯೆನ್ನದೆ ಎಲ್ಲವನ್ನೂ ಸಹಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ. "ಮನೆರಹಿತರಿಗೆ ಆಶ್ರಯವೊದಗಿಸುವುದು ಕೇಂದ್ರ ಸರಕಾರದ ಕರ್ತವ್ಯ. ಆದುದರಿಂದ ಅಧಿಕಾರಿಗಳು ಶ್ರೀ ರಾಮನಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆ ನಿರ್ಮಿಸಬೇಕು,'' ಎಂದು ರಾಜಭರ್ ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News