ಗರ್ಭಿಣಿಗೆ ಎಚ್‍ಐವಿ: ರಕ್ತ ನೀಡಿದ ಯುವಕನಿಂದ ಆತ್ಮಹತ್ಯೆಗೆ ಯತ್ನ

Update: 2018-12-28 10:31 GMT

ಚೆನ್ನೈ, ಡಿ.28: ತನ್ನ ರಕ್ತ ವರ್ಗಾವಣೆ ಮಾಡಿದ್ದರಿಂದ ಗರ್ಭಿಣಿ ಎಚ್‍ಐವಿ ಪೀಡಿತಳಾದ ಪ್ರಕರಣವನ್ನು ರಕ್ತದಾನ ಮಾಡಿದ ಯುವಕ ಆತ್ಮಹತ್ಯೆಗೆ ಶ್ರಮಿಸಿದ್ದಾನೆ. ಎಚ್‍ಐವಿ ಪೀಡಿತನೆನ್ನುವ ವಿಚಾರವನ್ನು ಯುವಕನ ಕುಟುಂಬಕ್ಕೆ ಸಹಿಸುವುದು ಅಸಾಧ್ಯ ಎಂದರಿತ ಬಳಿಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇಲಿವಿಷ ಸೇವಿಸಿ ಗಂಭೀರ ಅಸ್ವಸ್ಥನಾದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸರಕಾರಿ ರಕ್ತಬ್ಯಾಂಕ್‍ನಿಂದ ರಕ್ತ ಸ್ವೀಕರಿಸಿದ್ದ ಗರ್ಭಿಣಿಯೊಬ್ಬಳು ಎಚ್‍ಐವಿ ಸೋಂಕಿಗೊಳಗಾಗಿದ್ದಳು. ಈ ಸಂಬಂಧ ರಕ್ತಪರೀಕ್ಷೆ ಮಾಡುವಲ್ಲಿ ನಿರ್ಲಕ್ಷ್ಯ ತೋರಿದ ಆರೋಪದಲ್ಲಿ ಓರ್ವ ನೌಕರರನ್ನು ಸೇವೆಯಿಂದ ತೆಗೆದು ಹಾಕಲಾಗಿದೆ. ಇನ್ನಿಬ್ಬರನ್ನು ಅಮಾನತುಗೊಳಿಸಲಾಗಿದೆ. ವಿರುದನಗರದ ಬಳಿಕ ಸತ್ತೂರ್ ಸರಕಾರಿ ಆಸ್ಪತ್ರೆಯಲ್ಲಿ ಘಟನೆ ನಡೆದಿತ್ತು. ಘಟನೆ ವರದಿಯಾದ ಬಳಿಕ ರಾಜ್ಯದ ಬ್ಲಡ್‍ಬ್ಯಾಂಕ್‍ಗಳ ತಪಾಸಣೆಗೆ ತಮಿಳ್ನಾಡು ಸರಕಾರ ಆದೇಶ ಹೊರಡಿಸಿದೆ.

ಡಿಸೆಂಬರ್ ಮೂರರಂದು ಸತ್ತೂರಿನ ಆಸ್ಪತ್ರೆಗೆ ಗರ್ಭಿಣಿ ಆರೋಗ್ಯ ತಪಾಸಣೆಗೆ  ಹಾಜರಾಗಿದ್ದರು. ಆಗ ವೈದ್ಯರು ಗರ್ಭಿಣಿಗೆ ರಕ್ತ ಕೊಡಲು ಸೂಚಿಸಿದ್ದರು. ಸಮೀಪದ ಸರಕಾರಿ ಆಸ್ಪತ್ರೆಯ ರಕ್ತಬ್ಯಾಂಕಿನಿಂದ ರಕ್ತವನ್ನು ತಂದು ಆಕೆಗೆ ನೀಡಲಾಗಿತ್ತು. ನಂತರ ಪರೀಕ್ಷಿಸಿದಾಗ ಆ ಮಹಿಳೆಗೆ ಎಚ್‍ಐವಿ ತಗಲಿದ್ದು ಪತ್ತೆಯಾಗಿತ್ತು. ಯುವಕ ಆತನ ಸಂಬಂಧಿಕರೊಬ್ಬರಿಗಾಗಿ ರಕ್ತಬ್ಯಾಂಕಿನಲ್ಲಿ ರಕ್ತ ಕೊಟ್ಟಿದ್ದನು. ಆದರೆ ಅದನ್ನು ಉಪಯೋಗಿಸಿರಲಿಲ್ಲ. ನಂತರ ಆ ರಕ್ತವನ್ನು ಗರ್ಭಿಣಿ ಮಹಿಳೆಗೆ ನೀಡಲಾಗಿತ್ತು.

ಯುವಕನಿಗೆ ಎಚ್‍ಐವಿ ಇರುವುದು 2016ರಲ್ಲಿಯೇ ಪತ್ತೆಯಾಗಿತ್ತು. ಸತ್ತೂರಿನ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಲು ಬಂದಾಗ ಎಚ್‍ಐವಿ ಇರುವುದು ಪತ್ತೆಯಾಗಿತ್ತು. ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ಗರ್ಭಿಣಿಯ ಕುಟುಂಬಕ್ಕೆ ವಿಷಾದವನ್ನು ಸೂಚಿಸಿದ್ದೇವೆ ಎಂದು ತಮಿಳ್ನಾಡು ಮೀನುಗಾರಿಕಾ ಸಚಿವ ಡಿ. ಜಯಕುಮಾರ್ ತಿಳಿಸಿದ್ದಾರೆ. ಇದೇವೇಳೆ ಸರಕಾರ ವಾಗ್ದಾನ ಮಾಡಿದ ಸರಕಾರಿ ಕೆಲಸವನ್ನು ತಿರಸ್ಕರಿಸಿದ ಮಹಿಳೆಯ ಪತಿ, ತನ್ನ ಪತ್ನಿಗೆ ಉನ್ನತ ಚಿಕಿತ್ಸೆ ಕೊಡಿಸಬೇಕೆಂದು ಸರಕಾರವನ್ನು ಆಗ್ರಹಿಸಿದ್ದಾರೆ. ಮದ್ರಾಸ್ ಹೈಕೋರ್ಟು ಸ್ವಪ್ರೇರಣೆಯಿಂದ ಕೇಸು ದಾಖಲಿಸಿಕೊಂಡಿದ್ದು, ಜನವರಿ ಮೂರರಂದು ಘಟನೆಯ ಪ್ರಗತಿಯನ್ನು ತಿಳಿಸಬೇಕೆಂದು ಸರಕಾರಕ್ಕೆ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News