ಅಮೆರಿಕದಲ್ಲಿ ಪ್ರಬಲ ಹಿಮ ಮಾರುತ: ನೂರಾರು ವಿಮಾನಗಳ ಹಾರಾಟ ರದ್ದು
Update: 2018-12-28 20:44 IST
ಶಿಕಾಗೊ, ಡಿ. 28: ಪ್ರಬಲ ಹಿಮ ಮಾರುತವೊಂದು ಮಧ್ಯ ಅಮೆರಿಕದತ್ತ ಬೀಸುತ್ತಿದ್ದು, ಅಮೆರಿಕದಾದ್ಯಂತ ನೂರಾರು ವಿಮಾನಗಳನ್ನು ರದ್ದುಪಡಿಸಲಾಗಿದೆ ಹಾಗೂ ಸಾವಿರಾರು ವಿಮಾನಗಳ ಹಾರಾಟವನ್ನು ವಿಳಂಬಗೊಳಿಸಲಾಗಿದೆ.
ಸುಮಾರು 800 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ ಹಾಗೂ 6,500ಕ್ಕೂ ಅಧಿಕ ವಿಮಾನಗಳ ಹಾರಾಟವನ್ನು ಮುಂದೂಡಲಾಗಿದೆ ಎಂದು ವಿಮಾನ ಹಾರಾಟ ನಿಗಾ ವೆಬ್‌ಸೈಟ್ ‘ಫ್ಲೈಟ್‌ಅವೇರ್’ ತಿಳಿಸಿದೆ.
ಅದೇ ವೇಳೆ, ಮಳೆ, ಹಿಮಪಾತ ಮತ್ತು ಬಲವಾದ ಗಾಳಿಯಿಂದಾಗಿ ರಸ್ತೆಗಳಲ್ಲಿನ ಪ್ರಯಾಣವೂ ಅಪಾಯಕಾರಿಯಾಗಿ ಪರಿಣಮಿಸಿದೆ.
ಟೆಕ್ಸಾಸ್‌ನಲ್ಲಿರುವ ಡಲ್ಲಾಸ್-ಫೋರ್ಟ್ ವರ್ತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅತ್ಯಂತ ಹೆಚ್ಚಿನ ವ್ಯತ್ಯಯಗಳು ಸಂಭವಿಸಿವೆ.