×
Ad

ಐಸ್‌ಲ್ಯಾಂಡ್: ವಾಹನ ಸೇತುವೆಯಿಂದ ಉರುಳಿ ಭಾರತ ಮೂಲದ ಮೂವರ ಸಾವು

Update: 2018-12-28 20:50 IST

ಲಂಡನ್, ಡಿ. 28: ಐಸ್‌ಲ್ಯಾಂಡ್ ಪ್ರವಾಸದಲ್ಲಿರುವ ಭಾರತ ಮೂಲದ ಕುಟುಂಬವೊಂದು ಪ್ರಯಾಣಿಸುತ್ತಿದ್ದ ವಾಹನವು ಗುರುವಾರ ಸೇತುವೆಯೊಂದರಿಂದ ಉರುಳಿ ಸಂಭವಿಸಿದ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ.

ಬ್ರಿಟನ್‌ನಲ್ಲಿ ನೆಲೆಸಿರುವ ಈ ಕುಟುಂಬದ ಏಳು ಸದಸ್ಯರು ಪ್ರವಾಸದಲ್ಲಿದ್ದರು. ಇಬ್ಬರು ಮಹಿಳೆಯರು ಮತ್ತು ಒಂದು ಮಗು ಮೃತಪಟ್ಟವರು.

ನಾಲ್ವರು ಗಂಭೀರ ಪರಿಸ್ಥಿತಿಯಲ್ಲಿ ಐಸ್‌ಲ್ಯಾಂಡ್ ರಾಜಧಾನಿ ರಿಕ್‌ಜಾವಿಕ್‌ನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News