ಫಲಿತಾಂಶ ಪ್ರಕಟವಾಗಿ 18 ದಿನಗಳಾದರೂ ತೆಲಂಗಾಣ ಶಾಸಕರಿಂದ ಪ್ರಮಾಣವಚನವಿಲ್ಲ

Update: 2018-12-28 15:58 GMT

ಹೈದರಾಬಾದ್,ಡಿ.28: ತೆಲಂಗಾಣ ವಿಧಾನಸಭೆಗೆ ನೂತನವಾಗಿ ಆಯ್ಕೆಯಾಗಿರುವ ಶಾಸಕರ ಪ್ರಮಾಣ ವಚನ ಸ್ವೀಕಾರ ಪ್ರಕ್ರಿಯೆಯಲ್ಲಿ ವಿಳಂಬಕ್ಕಾಗಿ ಕಾಂಗ್ರೆಸ್ ಪಕ್ಷವು ಶುಕ್ರವಾರ ಕೆ.ಚಂದ್ರಶೇಖರ ರಾವ್ ನೇತೃತ್ವದ ಟಿಆರ್‌ಎಸ್ ಸರಕಾರವನ್ನು ತರಾಟೆಗೆತ್ತಿಕೊಂಡಿದೆ.

ಭಾರತದ ಇತಿಹಾಸದಲ್ಲಿ ಚುನಾವಣಾ ಫಲಿತಾಂಶ ಪ್ರಕಟಗೊಂಡು 18 ದಿನಗಳಾದರೂ ಶಾಸಕರು ಪ್ರಮಾಣ ವಚನವನ್ನು ಸ್ವೀಕರಿಸದ ರಾಜ್ಯವನ್ನು ನೀವು ನೋಡಿದ್ದೀರಾ ಎಂದು ಸುದ್ದಿಗಾರರನ್ನು ಪ್ರಶ್ನಿಸಿದ ತೆಲಂಗಾಣ ಕಾಂಗ್ರೆಸ್ ಉಸ್ತುವಾರಿ ಆರ್.ಸಿ.ಖುಂಟಿಯಾ ಅವರು, ಈ ಬಗ್ಗೆ ರಾಷ್ಟ್ರದ ಗಮನ ಅಗತ್ಯವಾಗಿದೆ. ಸಂಪುಟ ರಚನೆಯಾಗಿಲ್ಲ. 18 ದಿನಗಳಾದರೂ ಶಾಸಕರು ಪ್ರಮಾಣ ವಚನವನ್ನು ಸ್ವೀಕರಿಸಲು ಸಾಧ್ಯವಾಗಿಲ್ಲ ಎಂದು ಹೇಳಿದರು.

ರಾವ್ ಅವರು ಡಿ.13ರಂದು ತೆಲಂಗಾಣ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅವರೊಂದಿಗೆ ವಿಧಾನ ಪರಿಷತ್ ಸದಸ್ಯ ಮುಹಮ್ಮದ್ ಮೆಹಮೂದ್ ಅಲಿ ಅವರು ಏಕೈಕ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News