×
Ad

ಮಹಾರಾಷ್ಟ್ರ ಟೆನಿಸ್ ಓಪನ್: ಸಿಲಿಕ್ ಅಲಭ್ಯ

Update: 2018-12-28 23:44 IST

ಪುಣೆ, ಡಿ.28: ಮೊಣಕಾಲು ನೋವಿನಿಂದ ಬಳಲುತ್ತಿರುವ ಕಾರಣ ಮುಂಬರುವ ಮಹಾರಾಷ್ಟ್ರ ಓಪನ್‌ನಲ್ಲಿ ಭಾಗವಹಿಸುತ್ತಿಲ್ಲ ಎಂದು ವಿಶ್ವ ನಂ.7 ರ್ಯಾಂಕಿನ ಟೆನಿಸ್ ಆಟಗಾರ ಮರಿನ್ ಸಿಲಿಕ್ ಹೇಳಿದ್ದಾರೆ. ಈ ಕುರಿತು ಅವರು ತಮ್ಮ ಇನ್‌ಸ್ಟಾಗ್ರಾಮ್‌ಖಾತೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಕ್ರೊಯೇಶಿಯದ ಮರಿನ್ ಟೂರ್ನಿಯಿಂದ ಹೊರಗುಳಿಯುತ್ತಿರುವ ಕಾರಣ ಪೋರ್ಚುಗಲ್‌ನ ಪೆಡ್ರೊ ಸೌಸಾ ಅವರಿಗೆ ಟೂರ್ನಿಯ ಮುಖ್ಯ ಡ್ರಾ ಪ್ರವೇಶಕ್ಕೆ ಅವಕಾಶ ದೊರೆತಿದೆ.

‘‘ಟಾಟಾ ಓಪನ್ ಟೂರ್ನಿಯಿಂದ ಹೊರಗುಳಿಯುತ್ತಿರುವುದನ್ನು ಘೋಷಿಸಲು ನನಗೆ ದುಃಖವಾಗುತ್ತಿದೆ. ಅಭಿಮಾನಿಗಳು ಹಾಗೂ ಸಂಘಟಕರಲ್ಲಿ ಕ್ಷಮೆ ಕೋರುತ್ತೇನೆ’’ ಎಂದು ಸಿಲಿಕ್ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

‘‘ಮರಿನ್ ಗುರುವಾರ ರಾತ್ರಿಯವರೆಗೆ ನಮ್ಮ ಸಂಪರ್ಕದಲ್ಲಿದ್ದರು. ಅವರು ಭಾಗವಹಿಸದೇ ಇರುವುದಕ್ಕೆ ಬೇಸರವಾಗಿರುವುದನ್ನು ನಮ್ಮಲ್ಲಿ ಹಂಚಿಕೊಂಡಿದ್ದಾರೆ. ಖಂಡಿತವಾಗಿಯೂ ವಿಶ್ವ ಪ್ರಸಿದ್ಧ ಆಟಗಾರನ ಪ್ರದರ್ಶನದ ಸೊಬಗನ್ನು ಅವರ ಅಭಿಮಾನಿಗಳು ಕಳೆದುಕೊಳ್ಳಲಿದ್ದಾರೆ. ಮರಿನ್ ಆದಷ್ಟು ಶೀಘ್ರ ಗುಣಮುಖರಾಗಲಿ’’ ಎಂದು ಟೂರ್ನಿಯ ನಿರ್ದೇಶಕ ಪ್ರಶಾಂತ್ ಸುತಾರ್ ಹಾರೈಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News