ಇನ್ಸ್‌ಪೆಕ್ಟರ್ ಸ್ವಯಂ ಗುಂಡು ಹಾರಿಸಿಕೊಂಡಿದ್ದರು: ಬಿಜೆಪಿ ಶಾಸಕ

Update: 2018-12-29 14:33 GMT
ಸುಬೋಧ್ ಕುಮಾರ್ ಸಿಂಗ್

ಬುಲಂದ್‌ಶಹರ್, ಡಿ. 29: ಬುಲಂದ್‌ಶಹರ್ ಹಿಂಸಾಚಾರದ ಸಂದರ್ಭ ಇನ್ಸ್‌ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಬೇರೆ ದಾರಿ ಕಾಣದೆ ತಾನೇ ಗುಂಡು ಹಾರಿಸಿಕೊಂಡಿದ್ದಾರೆ ಎಂದು ಹೇಳುವ ಮೂಲಕ ಬಿಜೆಪಿ ಶಾಸಕ ದೇವೇಂದ್ರ ಸಿಂಗ್ ಲೋಧಿ ವಿವಾದಕ್ಕೆ ಒಳಗಾಗಿದ್ದಾರೆ.

‘‘ಅವರು ತಮ್ಮನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ, ಅನಂತರ ಅವರು ಭರವಸೆ ಕಳೆದುಕೊಂಡರು. ಆದುದರಿಂದ ಅವರು ಗುಂಡು ಹಾರಿಸಿಕೊಂಡರು. ಅವರನ್ನು ಗುರಿಯಾಗಿರಿಸಿ ಯಾರೂ ದಾಳಿ ನಡೆಸಿಲ್ಲ. ಪೊಲೀಸರು ಎಫ್‌ಐಆರ್ ದಾಖಲಿಸಿಕೊಳ್ಳದೇ ಇರುವುದರಿಂದ ಜನರ ಗುಂಪು ಉದ್ರಿಕ್ತಗೊಂಡಿತ್ತು’’ ಎಂದು ಅವರು ಹೇಳಿದ್ದಾರೆ.

ಚಿಂಗ್ರವಾಥ್ ಗ್ರಾಮದಲ್ಲಿ ದನದ ಕಳೇಬರ ಪತ್ತೆಯಾದ ಬಳಿಕ ಬುಲಂದ್‌ಶಹರ್‌ನಲ್ಲಿ ಡಿಸೆಂಬರ್ 3ರಂದು ನಡೆದ ಹಿಂಸಾಚಾರದಲ್ಲಿ ಸುಬೋಧ್ ಸಿಂಗ್ ಮೃತಪಟ್ಟಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಸುಬೋಧ್ ಸಿಂಗ್ ದೇಹದಲ್ಲಿ ಕಲ್ಲಿನಿಂದಾದ 6 ಗಾಯಗಳ ಗುರುತು ಕಂಡು ಬಂದಿತ್ತು. ಅಲ್ಲದೆ ಗುಂಡು ಅವರ ತಲೆ ಬುರುಡೆಯ ಒಳಗೆ ಸಿಲುಕಿಕೊಂಡಿತ್ತು. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಗುರುವಾರ ಪ್ರಶಾಂತ್ ನಾಥ್ ಅವರನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಈತ ತಾನು ಸುಬೋಧ್ ಸಿಂಗ್‌ಗೆ ಗುಂಡು ಹಾರಿಸಿರುವುದಾಗಿ ಒಪ್ಪಿಕೊಂಡಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News