ಮೇಘಾಲಯ ಕಲ್ಲಿದ್ದಲು ಗಣಿ ದುರಂತ: ಈವರೆಗೆ ಕೇವಲ 3 ಹೆಲ್ಮೆಟ್ ಪತ್ತೆ !
ಶಿಲ್ಲಾಂಗ್, ಡಿ. 29: ಮೇಘಾಲಯದ 320 ಅಡಿ ಆಳದ ನೆರೆಯಿಂದ ತುಂಬಿದ ಕಲ್ಲಿದ್ದಲು ಗಣಿಯಲ್ಲಿ ಸಿಲುಕಿಕೊಂಡಿರುವ 15 ಕಾರ್ಮಿಕರನ್ನು ರಕ್ಷಿಸಲು ರಕ್ಷಣಾ ಕಾರ್ಯಕರ್ತರು ಕಳೆದ 16 ದಿನಗಳಿಂದ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ನೌಕಾ ಪಡೆಯ ಈಜುಗಾರರು ಹಾಗೂ ಅತ್ಯಧಿಕ ಸಾಮರ್ಥ್ಯದ ಪಂಪ್‌ಗಳನ್ನು ಹೇರಿಸಲಾದ ಟ್ರಕ್ ಪೂರ್ವ ಜೈಂಟಿಯಾ ಹಿಲ್ಸ್ ಜಿಲ್ಲೆಯಲ್ಲಿರುವ ದುರ್ಗಮ ಪ್ರದೇಶಕ್ಕೆ ತಲುಪುತ್ತಿದೆ. ಕಡಿಮೆ ಸಾಮರ್ಥ್ಯ ಪಂಪ್ ನೀರು ಹೊರ ಹಾಕಲು ವಿಫಲವಾದ ಹಿನ್ನೆಲೆಯಲ್ಲಿ ಸೋಮವಾರ ಪರಿಹಾರ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಸ್ಥಳದಲ್ಲಿರುವ ಈಜುಗಾರರು ಇದುವರೆಗೆ ಮೂರು ಹೆಲ್ಮೆಟ್‌ಗಳನ್ನು ಮಾತ್ರ ಪತ್ತೆ ಮಾಡುವಲ್ಲಿ ಸಫಲರಾಗಿದ್ದಾರೆ. ರಕ್ಷಣಾ ಕಾರ್ಯಕರ್ತರು ಇದುವರೆಗೆ ಮೂರು ಹೆಲ್ಮೆಟ್‌ಗಳನ್ನು ಮಾತ್ರ ಪತ್ತೆ ಮಾಡಿದ್ದಾರೆ.
ಈ ಹೆಲ್ಮೆಟ್‌ಗಳು ಗಣಿಯ ಒಳಗಡೆ ಸಿಲುಕಿದ ಕಾರ್ಮಿಕರಿಗೆ ಸೇರಿರುವ ಸಾಧ್ಯತೆ ಇದೆ. ಕಾರ್ಮಿಕರು ಪತ್ತೆಯಾಗಿಲ್ಲ. ವಾಯು ಪಡೆಯ ವಿಮಾನ ಅತ್ಯಧಿಕ ಸಾಮರ್ಥ್ಯದ ಪಂಪ್‌ಗಳನ್ನು ಹೇರಿಕೊಂಡು ಗುವಾಹತಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ಇಳಿದಿತ್ತು. ದುರ್ಗಮ ಪ್ರದೇಶವಾದ ಲುಮ್ತಾರಿ ಗ್ರಾಮ ತಲುಪಲು ಈ ಟ್ರಕ್‌ಗಳು 220 ಕಿ.ಮೀ. ಕ್ರಮಿಸಬೇಕಿದೆ. ಘಟನಾ ಸ್ಥಳದಿಂದ 2 ಕಿ.ಮೀ. ದೂರವಿರುವ ಗುವಾಹತಿಯಿಂದ ರಸ್ತೆ ಮೂಲಕ ಈ ಪಂಪ್‌ಗಳನ್ನು ಕೊಂಡೊಯ್ಯಬೇಕಿದೆ.
ನೌಕಾ ಪಡೆಯ 15 ಮಂದಿ ಈಜುಗಾರರ ತಂಡ ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ ಘಟನಾ ಸ್ಥಳಕ್ಕೆ ಆಗಮಿಸುತಿದೆ.